LATEST NEWS
ವಿದ್ಯಾರ್ಥಿನಿ ನಿಕಿತಾ ಸಾವು ಪ್ರಕರಣ- ಸೂಕ್ತ ತನಿಖೆಗೆ ಆಗ್ರಹಿಸಿ Abvp ಸಂಘಟನೆಯಿಂದ ಪ್ರತಿಭಟನೆ

ಉಡುಪಿ ಜೂನ್ 23: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿಧ್ಯಾರ್ಥಿನಿ ನಿಕಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅದಮಾರು ಸಮೀಪದ ಕೆಮ್ಮುಂಡೇಲಿನ ನಿವಾಸಿ ನಿಕಿತಾ ಆನಾರೋಗ್ಯದಿಂದ ಚಿಕಿತ್ಸೆಗಾಗಿ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ನಿಕಿತಾ ಚಿಕಿತ್ಸೆ ಫಲಕಾರಿಯಾಗದೇ ಕಳೆದ ಭಾನುವಾರ ಸಾವನಪ್ಪಿದ್ದರು. ಇನ್ನು ವಿಧ್ಯಾರ್ಥಿನಿ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದರು.

ಇದೀಗ ವಿದ್ಯಾರ್ಥಿನಿ ನಿಕಿತಾ ಸಾವು ಪ್ರಕರಣ- ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಸಿಟಿ ಹಾಸ್ಪಿಟಲ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ABVP ಸಂಘಟನೆಯ ವಿದ್ಯಾರ್ಥಿಗಳನ್ನು ಪೊಲೀಸರು ರಸ್ತೆಯಲ್ಲೇ ತಡೆದು ನಿಲ್ಲಿಸಿದ್ದು, ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ.