LATEST NEWS
ಮಂಗಳೂರು ವಿವಿಯ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ..ಇಲ್ಲದಿದ್ದರೆ ವಿಶ್ವವಿದ್ಯಾಲಯ ಚಲೋ – ಸರಕಾರಕ್ಕೆ ಎಬಿವಿಪಿ ಎಚ್ಚರಿಕೆ
ಮಂಗಳೂರು ಫೆಬ್ರವರಿ 06: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಉದ್ಯೋಗಿಗಳ ನೇಮಕಾತಿ ಪ್ರಕರಣದಲ್ಲಿ ಕೈಜೋಡಿಸಿದ ಮಂಗಳೂರು ವಿವಿ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ ಪರೀಕ್ಷಾಂಗ ಕುಲಸಚಿವರ ಅಮಾನತು ಹಾಗೂ ಪ್ರಭಾರ ಕುಲಪತಿಗಳು ರಾಜೀನಾಮೆ ನೀಡಬೇಕು ಹಾಗೂ ರಾಜ್ಯ ಸರಕಾರ ಕೂಡಲೇ ನೂತನ ಕುಲಪತಿಗಳನ್ನು ನೇಮಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಹರ್ಷಿತ್ ಕೋಯಿಲ್ ರಾಜ್ಯದ ಇತಿಹಾಸದಲ್ಲೇ ಇಡಿ ಸಂಸ್ಥೆ ವಿಶ್ವವಿದ್ಯಾನಿಲಯದ ವಿವಿ ಪರಿಕ್ಷಾಂಗ ಕುಲಸಚಿವ, ಕುಲಪತಿಗಳ ವಿಚಾರಣೆ ನಡೆಸಿದ್ದು, ಶಿಕ್ಷಣಕಾಶಿ ಏಂದೇ ಹೆಸರಾದ ಮಂಗಳೂರಿನಲ್ಲಿ ಶಿಕ್ಷಣ ಹೆಸರಿನಲ್ಲಿ ವಿವಿ ಅಧಿಕಾರಿಗಳು ಹಗರಣದಲ್ಲಿ ಬಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಹಗರಣ ನಡೆಸಿದವರನ್ನು ಅಮಾನತು ಮಾಡಬೇಕು ಎಂದರು. ವಿವಿಯಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲದೆ ಶೈಕ್ಷಣಿಕ ಚಟುವಟಿಕೆಗಳು ನಡೆಯಬೇಕು ಇಲ್ಲವಾದಲ್ಲಿ ಮಂಗಳೂರ ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಒಟ್ಟು ಸೇರುವಿಕೆಯಲ್ಲಿ ವಿಶ್ವವಿದ್ಯಾಲಯ ಚಲೋ ನಡೆಸುವುದಾಗಿ ಎಬಿವಿಪಿ ಸರಕಾರಕ್ಕೆ ಎಚ್ಚರಿಕೆ ನೀಡಿದೆ.