Connect with us

    DAKSHINA KANNADA

    ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ನೇಮಕ..!

    ಪುತ್ತೂರು : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ನೇಮಕ ಮಾಡಲಾಗಿದೆ.

    ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಡಾ.ಅನಿಲ್ ಥಾಮಸ್ ಈ ನೇಮಕ ಮಾಡಿದ್ದಾರೆ. ಅಬ್ದುಲ್ ಮನ್ನಾನ್ ಬಿ.ಎಸ್.ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಬಿ.ಎಸ್ ಯಡಿಯೂರಪ್ಪ ಈ ಹಿಂದೆ ಅಬ್ದುಲ್ ಮನ್ನಾನ್ ಗೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದರು. ಚುನಾವಣೆ ಸಂದರ್ಭ ಬೆಂಗಳೂರಿನಲ್ಲಿ ಪಕ್ಷದ ಪ್ರಚಾರದಲ್ಲಿ ಯುವಕರನ್ನ ಒಗ್ಗೂಡಿಸಿ ಕೆಲ ಬಿಜೆಪಿ ನಾಯಕರ ಗೆಲುವಿಗೆ ಕಾರಣರಾಗಿದ್ದು,ಕಳೆದ 17 ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು. ಮಂಡಲ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಈ ಹಿಂದೆ ಜವಾಬ್ದಾರಿ ವಹಿಸಿದ್ದು,ಎಬಿವಿಪಿ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದರು.ಈ ಹಿನ್ನೆಲೆ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಅಬ್ದುಲ್ ಮನ್ನಾನ್ ಅವರು ನೇಮಕಮಾಡಲಾಗಿದೆ ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply