MANGALORE
ಕಳಪೆ ಕಾಮಗಾರಿ ರಸ್ತೆಗಿಳಿದ ಆಮ್ ಆದ್ಮಿ
ಮಂಗಳೂರು, ಸೆಪ್ಟೆಂಬರ್ 14 : ಮಂಗಳೂರು ನಗರದ ಬೆಂದೂರು ಸಂತ ಆಗ್ನೆಸ್ ಕಾಲೇಜಿನ ಬಳಿ ಆಮ್ ಆದ್ಮೀ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಂಗಳೂರು ಮಹಾಗರಪಾಲಿಕೆ ಇಲ್ಲಿ ಕಳಪೆ ಕಾಮಗಾರಿಯನ್ನು ನಡೆಸಿದೆ ಎಂದು ಆಮ್ ಆದ್ಮಿ ಪಕ್ಷ ದೂರಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ನಸೀರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಪ್ರತಿಭಟನಕಾರರು ಮನವಿ ಮಾಡಿದ್ದರು.ಮನವಿ ಸ್ಪಂದಿಸಿ ಸ್ಥಳ ಪರಿಶೀಲನೆ ಮಾಡುವುದಾಗಿ ಹೆಳಿದರೂ ಸ್ಥಳಕ್ಕೆ ಬಾರದ ಎಂಸಿಸಿ ಆಯುಕ್ತರ ನಡೆಯನ್ನೂ ಪ್ರತಿಭಟನಕಾರರು ಖಂಡಿಸಿದರು.
You must be logged in to post a comment Login