Connect with us

FILM

ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಯುವಕ…

ಮಂಗಳೂರು: ರಿಯಾಲಿಟಿ ಶೋಗಳಲ್ಲಿ ಅತ್ಯಂತ ಹೆಚ್ಚು ಜನಮೆಚ್ಚಿದ, ಪ್ರಶಂಸೆಗೆ ಪಾತ್ರವಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಎಂಟ್ರಿ ಕೊಡೋದು ಸುಲಭದ ಮಾತಲ್ಲ. ಚಿತ್ರರಂಗ ಮತ್ತು ಸಿರಿಯಲ್ ಕ್ಷೇತ್ರದ ಘಟಾಉಘಟಿಗಳು ಈ ಶೋ ನಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋದು ಸುಳ್ಳಲ್ಲ. ಇಂಥ ಫೇಮಸ್ ರಿಯಾಲಿಟಿ ಶೋನಲ್ಲಿ ಮಂಗಳೂರಿನ ಯುವಕನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ತೆಲುಗು ಬಿಗ್ ಬಾಸ್ ನ 8 ನೇ ಆವೃತ್ತಿ ಆಯ್ಕೆಯಾಗಿರುವ ಈ ಯುವಕ ಮಂಗಳೂರಿನ ಪೃಥ್ವಿ ಶೆಟ್ಟಿ. ಮೂಲತ ಮಂಗಳೂರಿನವರಾದ ಇವರು ಇದೀಗ ಬಿಗ್ ಬಾಸ್ ಶೋ ಒಳಗೆ ಎಂಟ್ರಿ ಕೊಟ್ಟು ತಮ್ಮ ಪ್ರದರ್ಶನ ನೀಡುತ್ತಿದ್ದಾರೆ.

ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರು,ಕಾಸರಗೋಡು ಮತ್ತು‌ ಉಡುಪಿ ಜಿಲೆಯಲ್ಲಿ ಮುಗಿಸಿರುವ ಪೃಥ್ವಿ ವಿದ್ಯಾಭ್ಯಾಸದ ಬಳಿಕ ಫ್ಯಾಷನ್ ಫೀಲ್ಡ್ ಗೆ ವಾಲಿದ್ದರು. ಕಾಲೇಜು ದಿನಗಳಲ್ಲಿಯೇ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡು ಯಶಸ್ಸು ಕಂಡಿದ್ದ ಪೃಥ್ವಿ ಬಳಿಕದ ದಿನಗಳಲ್ಲಿ ಚಿತ್ರರಂಗ ಮತ್ತು ಟಿವಿ ಶೋಗಳಲ್ಲಿ ಅಭಿನಯಿಸುವ ಇಚ್ಛೆಯಿಂದ ಬೆಂಗಳೂರು ಮಹಾನಗರಕ್ಕೆ ಪ್ರಯಾಣ ಬೆಳೆಸಿದ್ದರು.

ಹಲವು ಸಣ್ಣ-ಪುಟ್ಟ ಧಾರಾವಾಹಿಗಳಲ್ಲಿ ನಟಿಸಿರುವ ಪೃಥ್ವಿ ಶೆಟ್ಟಿಗೆ ಉತ್ತಮ ಬ್ರೇಕ್ ದೊರೆತಿದ್ದು, ಪ್ರೀತಿಯ ಅರಸ ಮತ್ತು ಅರ್ಧಾಂಗಿ ಎನ್ನುವ ಟಿವಿ ಸೀರಿಯಲ್ ನಲ್ಲಿ. ಎರಡೂ ಧಾರಾವಾಹಿಗಳಲ್ಲಿ ತಮ್ಮ ಸಾಧನೆ ತೋರಿರುವ ಪೃಥ್ವಿ ಗೆ ಬಳಿಕದ ದಿನಗಳಲ್ಲಿ ತೆಲುಗು ಭಾಷೆಯ ಮೆಗಾ ಧಾರಾವಾಹಿಗಳಲ್ಲೂ ಅವಕಾಶ ದೊರೆತಿದೆ.ತೆಲುಗಿನ ಸೂಪರ್ ಹಿಟ್ ಧಾರಾವಾಹಿಯಾದ ನಾಗಪಂಚಮಿಯಲ್ಲಿನ ನಟನೆಗೆ ಪೃಥ್ವಿ ಶೆಟ್ಟಿ ಮನೆ ಮಾತಾಗಿದ್ದಾರೆ. ಈಗಾಗಲೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಆ ಚಿತ್ರಗಳಲ್ಲೂ ಯಶಸ್ಸು ಕಾಣುವ ವಿಶ್ವಾಸದಲ್ಲಿದ್ದಾರೆ.

ತೆಲುಗು ಟಿವಿ ಶೋಗಳಲ್ಲಿ ಮಿಂಚಿರುವ ಪೃಥ್ವಿಯವರನ್ನು ಅವರ ಸಾಧನೆ ಹಾಗು ಯಶಸ್ಸನ್ನು ಪರಿಗಣಿಸಿ ಬಿಗ್ ಬಾಸ್ ನ 8 ನೇ ಆವೃತ್ತಿಗೆ ಆಯ್ಕೆ ಮಾಡಲಾಗಿದೆ. ಓಟಿಂಗ್ ನಲ್ಲೂ ಮೂರನೇ ಸ್ಥಾನವನ್ನು ಕಾಯ್ದುಕೊಂಡಿರುವ ಪೃಥ್ವಿ ಬಿಗ್ ಬಾಸ್ ಆಗಿ ಹೊರಬರಲಿ ಎನ್ನುವ ಹಾರೈಕೆಗಳೂ ಕೇಳಿ ಬರಲಾರಂಭಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *