LATEST NEWS
ಅಮೇರಿಕದಲ್ಲಿ ಭೀಕರ ವಾಹನ ಅಪಘಾತ, ನಾಲ್ವರು ಭಾರತೀಯರು ಮೃತ್ಯು
ವಾಷಿಂಗ್ಟನ್ : ಅಮೇರಿಕದ ಟೆಕ್ಸಾಸ್‌ನಲ್ಲಿ ನಡೆದ ಭೀಕರ ಅಪಘಾತಕ್ಕೆ ಓರ್ವ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ಶುಕ್ರವಾರ ಈ ಘಟನೆ ನಡೆದಿದ್ದು ಅವರೆಲ್ಲರು ಅರ್ಕಾನಸ್ ಮೂಲಕ ಬೆಂಟೊನ್ ವಿಲ್ಲೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸಿದಾಗ, ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾರೆ. ಅವರ ಗುರುತುಗಳನ್ನು ಪತ್ತೆ ಹಚ್ಚಲು ಪೊಲೀಸರು ಡಿಎನ್ಎ ಪರೀಕ್ಷೆಯ ಮೊರೆ ಹೋಗಿದ್ದಾರೆ. ಮೃತರನ್ನು ಆರ್ಯನ್ ರಘುನಾಥ್ ಒರಾಂಪತಿ, ಫಾರೂಖ್ ಶೇಕ್, ಲೋಕೇಶ್ ಪಾಲಚಾರ್ಲ ಹಾಗೂ ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ಡಲ್ಲಾಸ್ ನಲ್ಲಿ ತಮ್ಮ ಸೋದರ ಸಂಬಂಧಿಯೊಬ್ಬರನ್ನು ಭೇಟಿಯಾದ ನಂತರ ಒರಾಂಪತಿ ಅವರು ತಮ್ಮ ಗೆಳೆಯ ಶೇಕ್ ರೊಂದಿಗೆ ಮನೆಗೆ ಮರಳುತ್ತಿದ್ದರು. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲೋಕೇಶ್ ಪಾಲಚಾರ್ಲ ಅವರಿ ಬೆಂಟೋನ್ ವಿಲ್ಲೆಯಲ್ಲಿರುವ ತಮ್ಮ ಪತ್ನಿಯನ್ನು ಭೇಟಿ ಮಾಡಲು ತೆರಳುತ್ತಿದ್ದರು. ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು, ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದ ದರ್ಶಿನಿ ವಾಸುದೇವನ್ ಅವರು ತಮ್ಮ ಚಿಕ್ಕಪ್ಪನನ್ನು ಭೇಟಿ ಮಾಡಲು ಬೆಂಟೋನ್ ವಿಲ್ಲೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಅವರೆಲ್ಲರೂ ಕಾರ್ ಪೂಲಿಂಗ್ ಆ್ಯಪ್ ಮೂಲಕ ಕಾರಿನಲ್ಲಿ ಪ್ರಯಾಣಿಸಿದ್ದು, ಇದರಿಂದ ಅವರ ಗುರುತನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
You must be logged in to post a comment Login