Connect with us

    LATEST NEWS

    ಸೌದಿಯಲ್ಲಿ ನಡೆದ ರಸ್ತೆ ಅಪಘಾತದ ಗಾಯಾಳು ಕಾಪುವಿನ ಯುವಕ ಮೃತ್ಯು

    ಕಾಪು, ಎಪ್ರಿಲ್ 10: ಎರಡು ವಾರದ ಹಿಂದೆ ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಾಪು ನಿವಾಸಿಯೊಬ್ಬರು ಜುಬೈಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಕಾಪು ಸಮೀಪದ ಮಜೂರು ಕೊಂಬಗುಡ್ಡೆ ನಿವಾಸಿ ಮುಹಮ್ಮದ್ ರಿಯಾಝ್(27) ಮೃತಪಟ್ಟವರು. ಮಾರ್ಚ್ 25ರಂದು ಜುಬೈಲ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಜುಬೈಲ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರವಿವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಮೃತರು ತಂದೆತಾಯಿ, ಪತ್ನಿಯನ್ನು ಅಗಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply