LATEST NEWS
ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಗೇ ಆವಾಜ್ ಹಾಕಿದ ಮಹಿಳೆ : ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಉಡುಪಿ, ಮೇ 01: ಉಡುಪಿ ಜಿಲ್ಲೆಯಲ್ಲಿ ಕೋರೊನಾ ಎಮರ್ಜೆನ್ಸಿ ಲಾಕ್ ಡೌನ್ ಹಿನ್ನಲೆಯಲ್ಲಿ, ಉಡುಪಿ ನಗರದಲ್ಲಿ ಅನಗತ್ಯವಾಗಿ ತಿರುಗಾಡುವರ ಮೇಲೆ ಕ್ರಮ ಜರುಗಿಸಲು ಪೋಲಿಸ್ ಇಲಾಖೆ ಮುಂದಾಗಿದೆ.
ಅನಗತ್ಯವಾಗಿ ಓಡಾಡುತ್ತಿದ್ದ ಮಹಿಳೆಗೆ ಟ್ರಾಫಿಕ್ ಎಸೈ ದಂಡವಿಧಿಸಿದ ಘಟನೆ ಉಡುಪಿ ಕ್ಲಾಕ್ ಟವರ್ ಬಳಿ ನಡೆದಿದೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಗೆ ಟ್ರಾಫಿಕ್ ಎಸೈ ಎಚ್ಚರಿಸಿದ್ದಾರೆ. ಕಾರನ್ನು ಬದಿಗೆ ನಿಲ್ಲಿಸಿ ಮಾತನಾಡಲು ಟ್ರಾಫಿಕ್ ಎಸೈ ಅಬ್ದುಲ್ ಖಾದರ್ ಸೂಚಿಸಿದ್ದಾರೆ.

ಈ ಸಂದರ್ಭ ಮಾಡಿದ ತಪ್ಪಿಗೆ ದಂಡ ಕಟ್ಟಲು ಟ್ರಾಫಿಕ್ ಎಸೈ ಸೂಚಿಸಿದಾಗ ಮಹಿಳೆ ರಸ್ತೆಯಲ್ಲಿ ನಿಂತು ಜನರನ್ನು ಸುಲಿಗೆ ಮಾಡುತ್ತೀರಾ ಎಂದು ಅವಾಜ್ ಹಾಕಿದ್ದಾರೆ. ಅಲ್ಲದೆ, ಪೊಲೀಸರು ನಡೆಸುತ್ತಿದ್ದ ಮೊಬೈಲ್ ಶೂಟಿಂಗಿಗೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರ ಇದೆ ಎಂದು ದುರುಪಯೋಗ ಮಾಡಬೇಡಿ ಎಂದು ಪೋಲಿಸರ ವಿರುದ್ಧ ಮಹಿಳೆ ಹರಿಹಾಯ್ದಿದ್ದಾರೆ.
ಕೋವಿಡ್ ಇದ್ದರು ಅನಗತ್ಯವಾಗಿ ತಿರುಗಾಡುತ್ತಾ, ರಸ್ತೆ ನಿಯಮ ಉಲ್ಲಂಫಿಸದರೆ ಸುಮ್ಮನಿರೋಲ್ಲ ಎಂದ ಎಸೈ ಅಬ್ದುಲ್ ಖಾದರ್ ಮಹಿಳೆಗೆ ಫೈನ್ ಹಾಕಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Video: