LATEST NEWS
ಕಾಪು – ಗಂಡನ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಹೆಂಡತಿ
ಕಾಪು ಸೆಪ್ಟೆಂಬರ್ 19 : ಹೆಂಡತಿ ಮೆಣಿಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ನನ್ನ ಮೈಮೇಲೆ ಎರಚಿದ್ದಾಳೆ ಎಂದು ವ್ಯಕ್ತಿಯೊಬ್ಬ ಕಾಪು ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ವಿರುದ್ದ ಪ್ರಕರಣ ದಾಖಲಿಸಿದ್ದಾನೆ.
ಘಟನೆಯಲ್ಲಿ ಗಾಯಗೊಂಡವರನ್ನು ಕಟಪಾಡಿ ಸಮೀಪದ ಮಣಿಪುರ ಗ್ರಾಮದ ಗುಜ್ಜಿಯ ಇನ್ನಾ ಮಡ್ಮಣ್ ನಿವಾಸಿ ಮುಹಮ್ಮದ್ ಆಸಿಫ್ ಎಂದು ಗುರುತಿಸಲಾಗಿದ್ದು ಅವರ ಪತ್ನಿ ಅಫ್ರೀನ್ ಕೃತ್ಯ ಎಸಗಿದ ಆರೋಪಿಯಾಗಿದ್ದಾರೆ.
ಆಸಿಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ಹೊಂದಿದ್ದ ಅಫ್ರೀನ್, ಆಸಿಫ್ ಜೊತೆ ದಿನಾ ಜಗಳವಾಡುತ್ತಿದ್ದಳು ಎಂದು ಹೇಳಲಾಗಿದೆ. ಇದೇ ರೀತಿ ಸೆಪ್ಟೆಂಬರ್ 17ರಂದು ಸಂಜೆ ಆಸಿಫ್ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಫ್ರೀನ್ ಹೊರಗಿನಿಂದ ಬಾಗಿಲು ಬಡಿದಿದ್ದು, ಆಸಿಫ್ ಬಾಗಿಲು ತೆರೆದಾಗ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಮೈ ಮೇಲೆ ಎರಚಿದ್ದಾಳೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ ಆಸಿಫ್ ನ ಮುಖ, ದೇಹ, ಎಡಗೈ, ಎದೆ, ಬೆನ್ನು ಬಲಕೈ ಸುಟ್ಟು ಹೋಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಸಿಫ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
You must be logged in to post a comment Login