LATEST NEWS
ಮಂಗಳೂರಿನ ಸಮುದ್ರ ತೀರಕ್ಕೆ ಬಂದು ಬೀಳುತ್ತಿರುವ ಬೃಹತ್ ಗಾತ್ರದ ಸತ್ತ ಮೀನುಗಳು

ಮಂಗಳೂರಿನ ಸಮುದ್ರ ತೀರಕ್ಕೆ ಬಂದು ಬೀಳುತ್ತಿರುವ ಬೃಹತ್ ಗಾತ್ರದ ಸತ್ತ ಮೀನುಗಳು
ಮಂಗಳೂರು ಜೂನ್ 30: ದಕ್ಷಿಣಕನ್ನಡ ಜಿಲ್ಲೆ ಸಮುದ್ರ ತೀರಕ್ಕೆ ವಿವಿಧ ಜಾತಿಯ ಸತ್ತ ಬೃಹತ್ ಜಾತಿ ಮೀನುಗಳು ತೇಲಿ ಬರುತ್ತಿರುವುದು ಮುಂದುವರೆದಿದೆ.
ಮಂಗಳೂರು ನಗರದ ಹೊರವಲಯದ ಸುರತ್ಕಲ್ ಬಳಿಯ ಮುಕ್ಕ ಬೀಚ್ ನ ದಡದಲ್ಲಿ ಈ ಬೃಹತ್ ಶಾರ್ಕ್ ಪತ್ತೆಯಾಗಿದೆ. ಬೃಹತ್ ಮೀನು ಕಂಡ ಸ್ಥಳೀಯ ಮೀನುಗಾರರು ಮೀನನ್ನು ದಡದಿಂದ ಮೇಲಕೆತ್ತಿದ್ದಾರೆ.

ನಿನ್ನೆ ಕೂಡ ಇದೇ ಪರಿಸರಲ್ಲಿ ಬೃಹತ್ ಮೀನು ಪತ್ತೆಯಾಗಿತ್ತು. ಈ ಹಿಂದೆ ಡಾಲ್ಫಿನ್ ಮೀನುಗಳೂ ಇದೇ ಪರಿಸರದಲ್ಲಿ ಸತ್ತು ದಡ ಸೇರಿದ್ದವು.
ಎರಡು ತಿಂಗಳಿನಿಂದ ಸತತ ಮೀನುಗಳು ಸಾವನಪ್ಪುತ್ತಿದ್ದರೂ ಇದುವರೆಗೂ ಕಾರಣ ಕಂಡು ಹಿಡಿಯಲಾಗಿಲ್ಲ. ಎರಡು ಬಾರಿ ಅಧಿಕಾರಿಗಳು ಮಹಜರು ನಡೆಸಿ ದಾಖಲೆ ಸಂಗ್ರಹಿಸಿದ್ದಾರೆ. ಬೃಹತ್ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಈ ಎಲ್ಲಾ ವಿದ್ಯಮಾನಗಳಿಂದ ಕರಾವಳಿ ಮೀನುಗಾರರು ಅತಂಕದದಲ್ಲಿದ್ದು, ಬೃಹತ್ ಮೀನುಗಳ ಸರಣಿ ಸಾವಿಕೆ ಕಾರಣಗಳು ಸ್ಪಷ್ಟವಾಗಿಲ್ಲದಿದ್ದರೂ ಸಮುದ್ರದಲ್ಲಿ ಹೆಚ್ಚುತ್ತಿರುವ ಮಲಿನತೆಯಿಂದ ಈ ಘಟನೆಗಳು ಸಂಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ.