Connect with us

LATEST NEWS

ದೀಕ್ಷಾಳ ಮುಂದಿನ ವೈದ್ಯಕೀಯ ವೆಚ್ಚಕ್ಕೆ ಸರಕಾರದಿಂದ ಸಹಕಾರ – ಯು.ಟಿ ಖಾದರ್

ದೀಕ್ಷಾಳ ಮುಂದಿನ ವೈದ್ಯಕೀಯ ವೆಚ್ಚಕ್ಕೆ ಸರಕಾರದಿಂದ ಸಹಕಾರ – ಯು.ಟಿ ಖಾದರ್

ಮಂಗಳೂರು ಜೂನ್ 30: ಪಾಗಲ್ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೀಕ್ಷಾಳ ಮುಂದಿನ ವೈದ್ಯಕೀಯ ಚಿಕಿತ್ಸೆಯ ವೆಚ್ಚಕ್ಕೆ ರಾಜ್ಯ ಸರಕಾರ ಸಹಾಯ ಒದಗಿಸಲಿದೆ ಎಂದು ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಅವರು ಇಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೀಕ್ಷಾಳ ಆರೋಗ್ಯ ವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಇಂದು ವಿಚಾರಿಸಿದರು. ಐಸಿಯು ನ ಒಳಗೆ ತೆರಳಿ ವೈದ್ಯರು ಹಾಗೂ ದೀಕ್ಷಾಳ ಪೋಷಕರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭ ತುರ್ತು ಚಿಕಿತ್ಸೆಗೆ ಸಹಾಯವಾಗಲೆಂದು ದೀಕ್ಷಾ ಕುಟುಂಬಕ್ಕೆ 50 ಸಾವಿರ ರೂಪಾಯಿ ಧನ ಸಹಾಯ ಮಾಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೆ.ಎಸ್. ಹೆಗ್ಡೆ ಆಸ್ಪತ್ರೆ ವೈದ್ಯರ ಶ್ರಮದಿಂದ ಸೋದರಿ ದೀಕ್ಷಾ‌ ಅಪಾಯದಿಂದ ಪಾರಾಗಿದ್ದು, ಅವರ ಮುಂದಿನ ಚಿಕಿತ್ಸೆಗೆ ಅಗತ್ಯವಿರುವ ವೆಚ್ಚಕ್ಕೆ ಸರಕಾರ ಸಹಾಯ ಒದಗಿಸಲಿದೆ ಎಂದು ಹೇಳಿದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದೀಕ್ಷಾರನ್ನು ಬದುಕಿಸಿದ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರ ಕಾರ್ಯ ಶ್ಲಾಘನೀಯ ಎಂದು ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರನ್ನು ಅಭಿನಂದಿಸಿದರು.

ದೀಕ್ಷಾ ಮೇಲೆ ಸುಶಾಂತ ಹಲ್ಲೆ ಮಾಡುತ್ತಿದ್ದರೆ ಸ್ಥಳದಲ್ಲಿ ಇದ್ದವರು ಸುಮ್ಮನೆ ನಿಂತಿದ್ದರು, ಸಾರ್ವಜನಿಕರು ಆರೋಪಿಯನ್ನು ತಡೆಯುವ ವಿಡಿಯೋ ರೆಕಾರ್ಡ್ ಮಾಡುತ್ತಿದ್ದದ್ದು ವಿಪರ್ಯಾಸ ಎಂದು ಹೇಳಿದರು. ಆದರೆ ನರ್ಸ್ ಒಬ್ಬರ ಸಮಯ ಪ್ರಜ್ಞೆಯಿಂದ ದೀಕ್ಷಾಳನ್ನು ರಕ್ಷಿಸಿದ್ದಾರೆ.

ದೀಕ್ಷಾಳ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಅಮಲು ಪದಾರ್ಥ ಸೇವಿಸಿ ಕೃತ್ಯ ಎಸಗಿರುವುದು ವೈದ್ಯರ ವರದಿಯಲ್ಲೂ ತಿಳಿದುಬಂದಿದೆ. ಈ ಕುರಿತಂತೆ ಪೊಲೀಸ್ ಇಲಾಖೆ ಆತ್ಮಾವಲೋಕನ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Facebook Comments

comments