KARNATAKA
ಕಾಲೇಜಿನ ಪ್ರಿನ್ಸಿಪಾಲ್ ಎಂದು ಯುವತಿ ಜೊತೆ ಸಿಕ್ಕಿ ಬಿದ್ದ ಬಿಜೆಪಿ ಮುಖಂಡ..ಹನಿಟ್ರ್ಯಾಪ್ ಕೇಸ್ಗೆ ಸ್ಫೋಟಕ ತಿರುವು

ಬೆಂಗಳೂರು: ಬಿಜೆಪಿ ಮುಖಂಡನ ಹನಿಟ್ರ್ಯಾಪ್ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಕಾಲೇಜಿನ ಫ್ರಿನ್ಸಿಪಾಲ್ ಎಂದು ಯುವತಿಯೊಬ್ಬಳ ಜೊತೆ ಲಾಡ್ಜ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿನ್ನಾಭರಣ ವ್ಯಾಪಾರಿಯಾಗಿರುವ ದಕ್ಷಿಣಕನ್ನಡ ಮೂಲದ ಜಗನ್ನಾಥ ಶೆಟ್ಟಿ ಬಿಜೆಪಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಇತ್ತೀಚಿಗೆ ಜಗನ್ನಾಥ್ ಶೆಟ್ಟಿ ನಾಲ್ವರ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಹನಿಟ್ರ್ಯಾಪ್ ಕೇಸ್ ದಾಖಲಿಸಿದ್ದರು. ಈ ಎಫ್ಐಆರ್ ನಲ್ಲಿರುವ ಅಂಶಕ್ಕೂ, ವೈರಲ್ ಆಗಿರುವ ವಿಡಿಯೋಗೂ ಭಾರೀ ವತ್ಯಾಸವಿದೆ.

ಮೈಸೂರಿನ ದರ್ಶನ್ ಲಾಡ್ಜ್ನಲ್ಲಿ ಸಲ್ಮಾ ಎಂಬ ಮಹಿಳೆ ಸೇರಿ ನಾಲ್ವರು ನುಗ್ಗುತ್ತಾರೆ. ಕೋಣೆಯೊಂದರಲ್ಲಿ ಕಾಲೇಜು ಯುವತಿ ಜತೆ ಜಗನ್ನಾಥ್ ಶೆಟ್ಟಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅದೇ ಕೋಣೆಯಲ್ಲಿ ಜಗನ್ನಾಥ್ ಶೆಟ್ಟಿ ಹೆರಸಲ್ಲಿ ನಕಲಿ ಐಡಿ ಕಾರ್ಡ್ ಕೂಡ ಸಿಗುತ್ತೆ. ಅದರಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಜಗನ್ನಾಥ್ ಶೆಟ್ಟಿ ಎಂದಿರುತ್ತೆ. ಇಬ್ಬರಿಗೂ ಏನು ಕೆಲಸ ಎಂದು ಸಲ್ಮಾರ ತಂಡ ಪ್ರಶ್ನಿಸಿದರೆ, ಇವರು ನಮ್ಮ ಪ್ರಿನ್ಸಿಪಾಲ್. ಟ್ಯೂಷನ್ ಹೇಳಿಸಿಕೊಳ್ಳೋಕೆ ಅಂತ ಇಲ್ಲಿಗೆ ಬಂದೆ, ಅವರಿಗೇನು ಮಾಡಬೇಡಿ ಪ್ಲೀಸ್… ಎಂದು ಯುವತಿ ಗೋಗರೆಯುತ್ತಾರೆ. ಯುವತಿ ಮತ್ತು ಜಗನ್ನಾಥ್ ಶೆಟ್ಟಿ ಇಬ್ಬರಿಗೂ ಸಲ್ಮಾ ಗ್ಯಾಂಗ್ ಥಳಿಸಿದ್ದು, ತಪ್ಪಾಯ್ತು ಬಿಟ್ಬಿಡಿ ಎಂದು ಜಗನ್ನಾಥ್ ಕೈಮುಗಿದು ಬೇಡಿದರೂ ಈ ತಂಡ ಬಿಟ್ಟಿಲ್ಲ. ಈ ಎಲ್ಲವನ್ನೂ ಸಲ್ಮಾ ಕಡೆಯವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ಇಷ್ಟೆಲ್ಲಾ ಆದ ಬಳಿಕ ಅಂದು ಲಾಡ್ಜ್ನಲ್ಲಿ ನಡೆದ ಕೃತ್ಯದ ವಿಡಿಯೋ ವೈರಲ್ ಆಗಿದೆ. ಜತೆಗೆ ಲಾಡ್ಜ್ಗೆ ಹೋಗುವ ಮುನ್ನ ಯುವತಿ ಮತ್ತು ಜಗನ್ನಾಥ್ ಶೆಟ್ಟಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ.