LATEST NEWS
ಎಲ್ ಕೆಜಿ ಓದುತ್ತಿದ್ದ ಬಾಲಕಿ ಮೆಲೆ ಅ*ತ್ಯಾ*ಚಾರಕ್ಕೆ ಯತ್ನಿಸಿದ ಆರೋಪಿ ಮೇಲೆ ಮಂಗಗಳ ದಾಳಿ – ಮಗು ಸೇಫ್
ಮೀರಠ್ ಸೆಪ್ಟೆಂಬರ್ 23: ಆರು ವರ್ಷದ ಬಾಲಕಿ ಮೇಲೆ ಅನಾಮಿಕ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ ಈ ವೇಳೆ ಅಲ್ಲೆ ಇದ್ದ ಮಂಗಗಳು ಆರೋಪಿ ಮೇಲೆ ದಾಳಿ ನಡೆಸಿ ಅತ್ಯಾಚಾರ ಯತ್ನವನ್ನು ವಿಫಲಗೊಳಿಸಿದ ಘಟನೆ ಬಾಗ್ ಪಥ್ ನಲ್ಲಿ ನಡೆದಿದೆ.
ಆರೋಪಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿ ಕೋತಿಗಳು ಆರೋಪಿಯ ಮೇಲೆ ಅಟ್ಯಾಕ್ ಮಾಡಿದೆ. ಇದರಿಂದ ಆರೋಪಿ, ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾದ ಎಂದು ಬಾಲಕಿಯ ಪೋಷಕರು ದೂರಿನಲ್ಲಿ ವಿವರಿಸಿದ್ದಾರೆ.
ಮನೆಗೆ ಮರಳಿದ ಬಾಲಕಿ ಘಟನೆಯನ್ನು ಕುಟುಂಬದವರಿಗೆ ವಿವರಿಸಿದ್ದು, ಹೇಗೆ ವಾನರಸೇನೆ ತನ್ನನ್ನು ಆರೋಪಿಯಿಂದ ರಕ್ಷಿಸಿತು ಎನ್ನುವುದನ್ನು ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಬಾಗ್ ಪಥ್ ವೃತ್ತಾಧಿಕಾರಿ ಹರೀಶ್ ಭಡೋರಿಯಾ ಸ್ಪಷ್ಟಪಡಿಸಿದ್ದಾರೆ.
You must be logged in to post a comment Login