Connect with us

LATEST NEWS

ಆಟೋರಿಕ್ಷಾ ಬಸ್ ಮುಖಾಮುಖಿ ಡಿಕ್ಕಿ 13 ಮಂದಿ ಸಾವು…!!

ಗ್ವಾಲಿಯರ್ ಮಾರ್ಚ್ 23: ಆಟೋ ರಿಕ್ಷಾ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ 13 ಮಂದಿ ಸಾವನಪ್ಪಿರುವ ಧಾರುಣ ಘಟನೆ ಗ್ವಾಲಿಯರ್ ನಲ್ಲಿ ನಡೆದಿದೆ.


ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋರಿಕ್ಷಾ ವೇಗವಾಗಿ ಬರುತ್ತಿದ್ದ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಅಪಘಾತದ ಪರಿಣಾಮ 12 ಮಂದಿ ಮಹಿಳೆಯರು ಮತ್ತು ಓರ್ವ ಪುರುಷ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನ ಹಳೆಯ ಪುರಾಣಿ ಚವಾನಿ ಪ್ರದೇಶದಲ್ಲಿ ನಡೆದಿದೆ.


ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಿಟ್ಟು ತಮ್ಮ ಮನೆಗೆ ಹಿಂತಿರುಗುತ್ತಿದ್ದರು ಎಂದು ಗ್ವಾಲಿಯರ್ ಎಸ್ ಪಿ ಅಮಿತ್ ಸಂಘಿ ತಿಳಿಸಿದ್ದಾರೆ.
ಪ್ರಯಾಣಿಕರಲ್ಲಿ 8 ಮಂದಿ ಮಹಿಳೆಯರು ಮತ್ತು ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ ಉಳಿದವರು ಆಸ್ಪತ್ರೆಗೆ ದಾಖಲಿಸಿದ ನಂತರ ಅಸುನೀಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *