Connect with us

LATEST NEWS

ಯುವ ಪತ್ರಕರ್ತ ದಿನೇಶ್ ಮಠ ನಿಧನ

ಪುತ್ತೂರು ಮಾರ್ಚ್ 23: ಸುಳ್ಯದ ಯುವ ಪತ್ರಕರ್ತ ದಿನೇಶ್ ಮಠ ಅವರು ಅಸೌಖ್ಯದಿಂದಾಗಿ ನಿನ್ನೆ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು.


ಕಳೆದ ಐದು ದಿನಗಳ ಹಿಂದೆ ಸುಳ್ಯದಿಂದ ಬಸ್ ಮೂಲಕ ಪುತ್ತೂರಿಗೆ ತೆರಳಿದ್ದ ಅವರು ಪುತ್ತೂರಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರೆನ್ನಲಾಗಿದೆ. ಅಲ್ಲಿ ಸ್ಥಳೀಯರು ಆರೈಕೆ ಮಾಡಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮರುದಿನ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಾರ್ಚ್ 22ರಂದು ಸಂಜೆ ನಿಧನರಾದರು.

ದಿನೇಶ್ ಅವರು ಸುಳ್ಯದ ಅಮರ ಸುಳ್ಯ ಸುದ್ದಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿದ್ದುಕೊಂಡು ಈ ಹಿಂದೆ ಕನಕಮಜಲಿನಲ್ಲಿ ಅಂಗಡಿ ನಡೆಸುತ್ತಾ ಕೃಷಿ ಕಾರ್ಯ ನಡೆಸುತ್ತಿದ್ದರು. ಕನಕಮಜಲು ಯುವಕ ಮಂಡಲದ ಸದಸ್ಯರಾಗಿ ಸಕ್ರಿಯರಾಗಿದ್ದ ದಿನೇಶ್ ಅವರು ತಾಯಿ ಶ್ಯಾಮಲ, ಸಹೋದರರಾದ ವಿನೋದ್ ಮಠ, ಹೇಮಂತ್ ಮಠ, ಪ್ರದೀಪ್ ಮಠ, ಸಹೋದರಿ ಪ್ರಮೀತ ಮಠ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ