Connect with us

    KARNATAKA

    ಸೋಮವಾರವನ್ನು ಭಾನುವಾರ ಎನ್ನುವ ಶಿಕ್ಷಕಿ…!: ಶಿಕ್ಷಕಿ ವಿರುದ್ದ ತಿರುಗಿ ಬಿದ್ದ ಮಕ್ಕಳು

    ಅಡೂರು, ಜೂನ್ 20: ಸೋಮವಾರವನ್ನು ಕನ್ನಡದಲ್ಲಿ ಭಾನುವಾರ ಎಂದು ಹೇಳುವ ಶಿಕ್ಷಕಿಯೋರ್ವರನ್ನು ಕನ್ನಡ ಮಾಧ್ಯಮ ಶಾಲೆಗೆ ನಿಯುಕ್ತಿಗೊಳಿಸಿದ ಘಟನೆಯೊಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅಡೂರು ಸರಕಾರಿ ಶಾಲೆಯಲ್ಲಿ ನಡೆದಿದೆ.

    ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಕಾಸರಗೋಡು ಇದರಲ್ಲಿ ಯಾವ ರೀತಿಯಲ್ಲಿ ಕನ್ನಡ ಶಾಲೆಯನ್ನು ಮುಚ್ಚಲು ಮಲಯಾಳವನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುವುದನ್ನು ತೋರಿಸಲಾಗಿತ್ತೋ,ಅಂಥಹುದೇ ಒಂದು ಘಟನೆ ಅಡೂರಿನ ಸರಕಾರಿ ಶಾಲೆಯಲ್ಲಿ ಇಂದು ನಡೆಯುತ್ತಿದೆ.

    ಕನ್ನಡ ಮತ್ತು ಮಲಯಾಳಂ ಮಾದ್ಯಮದ ಪ್ರತ್ಯೇಕ ಶಾಲೆ ಇಲ್ಲಿ ನಡೆಯುತ್ತಿದ್ದು,ಕನ್ನಡ ಮಾದ್ಯಮದಲ್ಲಿ ಸುಮಾರು 350 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ‌. ಇತ್ತೀಚೆಗೆ ಈ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗೆ ಬೇರೆ ಶಾಲೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಕೇರಳ ಶಿಕ್ಷಣ ಇಲಾಖೆ ಆ ಜಾಗಕ್ಕೆ ಹೊಸ ಶಿಕ್ಷಕಿಯೋರ್ವರನ್ನು ನೇಮಿಸಿದೆ.

    ಆದರೆ ಈ ಶಿಕ್ಷಕಿಗೆ ಕನ್ನಡದ ಅ.ಆ.ಇ.ಈ ಕೂಡಾ ಬರುತ್ತಿಲ್ಲ ಎನ್ನುವ ಆರೋಪವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಕನ್ನಡವನ್ನು ತಪ್ಪು ತಪ್ಲಾಗಿ ಉಚ್ಛರಿಸುವ. ಪಠ್ಯವನ್ನು ಕನ್ನಡದ ಬದಲು ಮಲಯಾಳಂ ನಲ್ಲೇ ಕಲಿಸುತ್ತಿದ್ದು, ಪಾಠವು ನಮಗೆ ಕೊಂಚವೂ ಅರ್ಥವಾಗುತ್ತಿಲ್ಲ ಎನ್ನುವ ಆರೋಪವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಅದರಲ್ಲೂ 10 ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಮಗೆ ಅರ್ಥವಾಗದ ಭಾಷೆಯಲ್ಲಿ ಸಮಾಜ ವಿಜ್ಞಾನವನ್ನು ಭೋಧಿಸಲಾಗುತ್ತಿದ್ದು, ಶಿಕ್ಷಕಿಯ ಪಾಠವನ್ನು ಅರ್ಥೈಸಿಕೊಳ್ಳದೆ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

    ಸಮಸ್ಯೆಯನ್ನು ಪರಿಹರಿಸುವಂತೆ ಪೋಷಕರು ಹಲವು ಬಾರಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗು ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅವುಗಳಿಗೆ ಸ್ಪಂದನೆಯೂ ದೊರೆತಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆ ಮತ್ತು ಕೇರಳ ಸರಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನೂ ಆರಂಭಿಸಿದ್ದಾರೆ. ಈ ಹಿಂದೆಯೂ ಕೇರಳ ಸರಕಾರ ಇದೇ ರೀತಿಯ ತಂತ್ರವನ್ನು ಅಳವಡಿಸಿ ಕೊನೆಗೆ ಕನ್ನಡ ಶಾಲೆಗಳನ್ನೇ ಮುಚ್ಚಲು ಯತ್ನಿಸಿದ್ದು, ಇದರ ಮುಂದಿನ ಭಾಗ ಇದಾಗಿದೆ ಎನ್ನುವುದು ಪ್ರತಿಭಟನಾನಿರತರ ಆರೋಪವಾಗಿದೆ.

    ಸೋಮವಾರವನ್ನು ಭಾನುವಾರ ಎನ್ನುವ ಶಿಕ್ಷಕಿಯನ್ನು ಕನ್ನಡ ಮಾಧ್ಯಮ ಶಾಲೆಗೆ ನಿಯೋಜಿಸಿದಲ್ಲಿ ಆ ಶಾಲೆಯ ವಿದ್ಯಾರ್ಥಿಗಳ ಗತಿಯೇನು ಎನ್ನುವ ಪ್ರಶ್ನೆಗಳೂ ಇದೀಗ ಮೂಡಲಾರಂಭಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *