Connect with us

DAKSHINA KANNADA

ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೆ ವೇಳೆ ಮುಸ್ಲಿಂ ವಿರುದ್ಧ ಹೊಸ ಅಭಿಯಾನ

ಪುತ್ತೂರು, ಎಪ್ರಿಲ್ 09: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವವು ಎಪ್ರಿಲ್ 10 ರಿಂದ 20 ರ ತನಕ ನಡೆಯಲಿದ್ದು, ಈ ಬಾರಿ ಅನ್ಯಧರ್ಮೀಯರಿಗೆ ಜಾತ್ರೋತ್ಸವದಲ್ಲಿ ವ್ಯಾಪಾರ-ವ್ಯವಹಾರಕ್ಕೆ ನಿಶೇಧ ಹೇರಲಾಗಿದೆ.

ಪುತ್ತೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂ ಆಟೋ, ಕ್ಯಾಬ್‌ಗಳನ್ನು ಬಳಕೆ ಮಾಡದಂತೆ ಹಿಂದೂ ಆಟೋ ಚಾಲಕ ಸಂಘಟನೆಗಳಿಂದ ಕೇಸರಿ ಧ್ವಜ ನೀಡುವ ಮೂಲಕ ಹೊಸ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಸಂಬಂಧ ಪುತ್ತೂರಿನ ಆಟೋ ಚಾಲಕರಿಗೆ ಭಗವಧ್ವಜವನ್ನು ವಿತರಣೆ ಮಾಡುವ ಕೆಲಸವನ್ನು ಈಗಾಗಲೇ ವೇದಿಕೆಯ ಕಾರ್ಯಕರ್ತರು ಆರಂಭಿಸಿದ್ದಾರೆ.

ಜಾತ್ರೆಯ ನೆಪದಲ್ಲಿ ಅನ್ಯಧರ್ಮೀಯರು ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಜಾಲದಲ್ಲಿ ಸಿಲುಕಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಈ ಬಾರಿ ಹಿಂದೂಗಳ ಆಟೋದಲ್ಲಿ ಮಾತ್ರವೇ ಭಕ್ತಾಧಿಗಳು ಜಾತ್ರೆಗೆ ಆಗಮಿಸಬೇಕು.

ಕೇಸರಿ ಧ್ವಜವಿರುವ ಆಟೋದಲ್ಲೇ ಸಂಚರಿಸುವ ಮೂಲಕ ಹಿಂದೂ ಬಡ ಆಟೋ ಚಾಲಕರಿಗೆ ಸಹಾಯ ಮಾಡಬೇಕು ಎನ್ನುವ ವಿಚಾರವನ್ನೂ ಹಿಂಜಾವೇ ತನ್ನ ಅಭಿಯಾನದಲ್ಲಿ ಬಳಸಿಕೊಂಡಿದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರದಿಂದ ಹಿಂದೂಗಳಿಗೆ ಯಾವುದೇ ಸಹಾಯ ದೊರೆಯುತ್ತಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುವ ಕೆಲಸವಾಗುತ್ತಿರುವ ಕಾರಣ,ಹಿಂದೂ ಸಮಾಜ ಇದೀಗ ತಾನೇ ಕಾರ್ಯಾಚರಣೆಗೆ ಇಳಿದಿದೆ ಎನ್ನುವುದು ಹಿಂಜಾವೇ ಮುಖಂಡರ ವಾದವಾಗಿದೆ. ಈ ಬ್ಗಗೆ ಎಲ್ಲೆಡೆ ವ್ಯಾಪಕ ಚರ್ಚೆ ಆಗುತ್ತಿದ್ದು, ಧರ್ಮ ಸಂಘರ್ಷಕ್ಕೆ ಮತ್ತೊಂದು ಕಾರಣ ಸಿಕ್ಕಂತಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *