Connect with us

LATEST NEWS

ವೈದ್ಯಕೀಯ ವಿದ್ಯಾರ್ಥಿನಿಯನ್ನು ಕಟ್ಟಿ ಹಾಕಿ ದರೋಡೆ

ಮಂಗಳೂರು,ಡಿಸೆಂಬರ್ 05 : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲದಲ್ಲಿ ದರೋಡೆ ನಡೆದಿದೆ.

ವೈದ್ಯಕೀಯ ವಿದ್ಯಾರ್ಥಿನಿಯನ್ನು ಕಟ್ಟಿ ಹಾಕಿ ದರೋಡೆ ಮಾಡಲಾಗಿದೆ.

ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಯ ಕೆ. ಎಸ್. ಹೆಗ್ಡೆ ಹಾಸ್ಟೆಲ್ ನಲ್ಲಿ  ಈ ಘಟನೆ ಸಂಭವಿಸಿದೆ.

ಘಟನೆಯ ವಿವರ :

ಸೌದಿ ಮೂಲದ ನಿಶಾನ ಚಾಕಂ ಎಂಬ ವಿದ್ಯಾರ್ಥಿನಿ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ  ವೈದ್ಯಕೀಯ ಕಾಲೇಜಿನಲ್ಲಿ ಎಂ ಬಿ ಬಿ ಎಸ್  ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದು, ಈಕೆ ಒಬ್ಬಳೆ ಕೆ.ಎಸ್. ಹಾಸ್ಟೆಲ್ ನಲ್ಲಿ ತಂಗಿದ್ದರು.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ತನ್ನ ಹಾಸ್ಟೆಲ್ ರೂಮಿನ ಬಾಗಿಲು ಬಡಿದ ಸಂದರ್ಭ ಬಾಗಿಲು ತೆರೆದಿದ್ದಾಳೆ.

ಈ ಸಂದರ್ಭ ಅಕ್ರಮವಾಗಿ ನಿಶಾನ ಚಾಕಂ ನ ರೂಮನ್ನು ಸುಮಾರು 22 ವರ್ಷದ ಯುವಕನೊಬ್ಬ ಪ್ರವೇಶಿಸಿದ್ದಾನೆ.

ಈ ಸಂದರ್ಭದಲ್ಲಿ ಸಹಾಯಕ್ಕೆ ಕೂಗಲು ಆಕೆ ಯತ್ನಿಸಿದ್ದಾಳೆ.

ಈ ಸಂದರ್ಭದಲ್ಲಿ ಅದಕ್ಕೆ ಅವಕಾಶ ನೀಡದ ಯುವಕ ಆಕೆಯ ಬಾಯಿಗೆ ಬಟ್ಟೆ ತುರುಕಿ ಹಗ್ಗದಿಂದ ಕಟ್ಟಿ ಹಾಕಿ, ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾನೆ.

ಹಲ್ಲೆ ನಡೆಸಿ 5 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದಾನೆ.

ಆದರೆ ಇವಳ ಬಳಿ ಅಷ್ಟು ಹಣ ಇಲ್ಲವೆಂದಾಗ ಕೊಣೆಯನ್ನು ಜಾಲಾಡಿ ಡ್ರಾವರಿನಲ್ಲಿದ್ದ  ಮೂರು ಸಾವಿರ ನಗದು ಹಾಗೂ ಎಟಿಎಂ ಕಾರ್ಡನ್ನು ಕಸಿದು ಪರಾರಿಯಾಗಿದ್ದಾನೆ.

ಈ ಸಂಬಂಧ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *