KARNATAKA
ಬೆಲೆ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರಿಂದ ಮಾಸ್ಟರ್ ಸ್ಟ್ರೋಕ್ ..!
ಕಾಂಗ್ರೆಸ್ ಸರಕಾರ ಮಹತ್ವದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಸುಲಭದ ದಾರಿ ಹುಡುಕಿದ್ದ ಸರ್ಕಾರ ಮದ್ಯದ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿದ್ದರು.
ಬೆಂಗಳೂರು : ಕಾಂಗ್ರೆಸ್ ಸರಕಾರ ಮಹತ್ವದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಸುಲಭದ ದಾರಿ ಹುಡುಕಿದ್ದ ಸರ್ಕಾರ ಮದ್ಯದ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿದ್ದರು.
ಆದ್ರೆ ಮದ್ಯಪ್ರಿಯರು ಕುಡಿಯುವ ಪ್ರಮಾಣವನ್ನೇ ಕಡಿಮೆ ಮಾಡಿ ಸರ್ಕಾಕ್ಕೆ ಮದ್ಯ ಪ್ರಿಯರು ಶಾಕ್ ನೀಡಿದ್ದಾರೆ.
ರಾಜ್ಯ ಸರಕಾರ ಜುಲೈ ತಿಂಗಳಲ್ಲಿ ಮದ್ಯ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿತ್ತು.
ಈ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಸುಲಭವಾಗಿ ಹಣ ಹೊಂದಾಣಿಕೆ ಮಾಡಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿತ್ತು.
ಆದರೆ ಮದ್ಯಪ್ರಿಯರು ಕುಡಿಯುವ ಪ್ರಮಾಣವನ್ನೇ ಕಡಿಮೆ ಮಾಡಿ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಮದ್ಯ ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ ಕಂಡಿದೆ.
ಹೆಚ್ಚು ಬಿಕರಿಯಾಗುತ್ತಿದ್ದ ಬಿಯರ್ ಮಾರಾಟದಲ್ಲೂ ಕುಸಿತವಾಗಿದೆ.
ಪ್ರತಿ ತಿಂಗಳು 2,500 ಕೋಟಿ ರೂ. ಬರುತ್ತಿದ್ದ ಆದಾಯ ಆಗಸ್ಟ್ನಲ್ಲಿ 962 ಕೋಟಿ ರೂ.ಗೆ ಕುಸಿದಿದೆ.
ಅಬಕಾರಿ ಸುಂಕ ಹೆಚ್ಚಳ ಆಗುತ್ತಿದ್ದಂತೆ ಬಾರ್, ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿದೆ.
ಬೆಲೆ ಏರಿಕೆ ಪರಿಣಾಮ ಕಡಿಮೆ ಬೆಲೆಯ ಮದ್ಯಕ್ಕೆ ಹೆಚ್ಚು ಬೇಡಿಕೆ ಇದೆ. ಸ್ಕಾಚ್ ಪ್ರಿಯರು ಪ್ರೀಮಿಯಮ್ ಬ್ರ್ಯಾಂಡ್ಗೆ ಶಿಫ್ಟ್ ಆಗಿದ್ದಾರೆ.
ಇನ್ನು ಪ್ರೀಮಿಯಮ್ ಬ್ರಾಂಡ್‌ನವರು ನಾರ್ಮಲ್ ಬ್ರ್ಯಾಂಡ್ಗೆ ಶಿಫ್ಟ್ ಆಗಿದ್ದಾರೆ.
ಇದರಿಂದ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಕೆಟ್ಟ ಪರಿಣಾಮ ಆಗಿದೆ.
ಹೀಗಾಗಿ ರಾಜ್ಯ ಪಾನೀಯ ನಿಗಮಕ್ಕೆ ಮದ್ಯಕ್ಕಾಗಿ ಸಲ್ಲಿಸುವ ಖರೀದಿ ಬೇಡಿಕೆ ಒಟ್ಟಾರೆ ಇಳಿಕೆ ಕಂಡಿದೆ.
ಅಬಕಾರಿ ಇಲಾಖೆ ಅಂಕಿಅಂಶಗಳ ಪ್ರಕಾರ ಮದ್ಯ ಮಾರಾಟ ಶೇ.15ರಷ್ಟು ಕುಸಿತವಾಗಿದ್ದರೆ, ಬಿಯರ್ ಶೇ.5ರಷ್ಟು ಕುಸಿದಿದೆ.
ಇದು ಸರಕಾರದ ಆದಾಯ ಸಂಗ್ರಹದ ಮೇಲೇ ತೀವ್ರ ಪರಿಣಾಮ ಬೀರಿದ್ದು ಇದು ಸರ್ಕಾರದ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ತೊಡಕಾಗಲಿದೆ.