LATEST NEWS
ನವಂಗಳೂರು ಬಂದರಿಗೆ ಆಗಮಿಸಿದ ಐಷರಾಮಿ ಪ್ರವಾಸಿ ಹಡಗು ಕರೋನಾ ತಪಾಸಣೆ ನಡೆಸಿದ ಅಧಿಕಾರಿಗಳು

ನವಂಗಳೂರು ಬಂದರಿಗೆ ಆಗಮಿಸಿದ ಐಷರಾಮಿ ಪ್ರವಾಸಿ ಹಡಗು ಕರೋನಾ ತಪಾಸಣೆ ನಡೆಸಿದ ಅಧಿಕಾರಿಗಳು
ಮಂಗಳೂರು ಫೆಬ್ರವರಿ 19: ಈ ಪ್ರವಾಸಿ ವರ್ಷದ 13ನೇ ಐಷರಾಮಿ ವಿದೇಶಿ ಹಡಗು ನವಮಂಗಳೂರು ಬಂದರಿಗೆ ಆಗಮಿಸಿದೆ. ಮುಂಬೈನಿಂದ ಹೊರಟಿದ್ದ ಕೋಸ್ಟಾ ವಿಕ್ಟೋರಿಯಾ ಎಂಬ ಹೆಸರಿನ ಹಡಗಿನಲ್ಲಿ 1800 ಪ್ರಯಾಣಿತರು ಹಾಗೂ 800 ಸಿಬ್ಬಂದಿಗಳು ಇದ್ದಾರೆ.
ಕರೋನಾ ವೈರಸ್ ಆತಂಕದ ಹಿನ್ನಲೆ ಎಲ್ಲಾ ಪ್ರವಾಸಿಗರನ್ನು ತಪಾಸಣೆಗೊಳಪಡಿಸಲಾಗಿದ್ದು,ಯಾರಲ್ಲೂ ಕರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೋನಾ ತಪಾಸಣೆ ಬಳಿಕ ಪ್ರವಾಸಿಗರಿಗೆ ನಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಬಾರಿ ಆಗಮಿಸಿದ ವಿಲಾಸಿ ಪ್ರವಾಸಿ ಹಡಗಿನಲ್ಲಿ ಮೂವರು ಚಿನಾ ಪ್ರಜೆಗಳಿದ್ದು, ಅವರನ್ನು ಹಡಗಿನಿಂದ ಕೆಳಗಿಳಿಯಲು ಅವಕಾಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿಯ ಹಡಗಿನಲ್ಲಿ ಯಾವುದೇ ಚೀನಾ ಪ್ರಜೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.