Connect with us

LATEST NEWS

ಕೈಕೊಟ್ಟ GPS : ಸೌದಿ ಮರುಭೂಮಿಯಲ್ಲಿ ನೀರು, ಆಹಾರವಿಲ್ಲದೆ ಸಹೋದ್ಯೋಗಿ ಜತೆ  ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಹೈದ್ರಾಬಾದ್ ವ್ಯಕ್ತಿ..!

ಹೈದರಾಬಾದ್: ತೆಲಂಗಾಣದ 27 ವರ್ಷದ ವ್ಯಕ್ತಿಯೊಬ್ಬ ಸಹೋದ್ಯೋಗಿ ಜತೆ  ತೀವ್ರ ನಿರ್ಜಲೀಕರಣ ಮತ್ತು ವಿಪರೀತ ಬಳಲಿಕೆ ತಾಳಲಾರದೆ ಸೌದಿ ಅರೇಬಿಯಾದ ಭಯಾನಕ ಮರಳುಗಾಡಿನಲ್ಲಿ ಸಿಲುಕಿ  ಮೃತಪಟ್ಟ ದಾರುಣ ಘಟನೆ ನಡೆದಿದೆ. ಸೌದಿಯ ಅಪಾಯಕಾರಿ  ರಬ್ ಅಲ್ ಖಲಿ ಮರುಭೂಮಿಯಲ್ಲಿ ಈ ದುರಂತ ನಡೆದಿದೆ.


ತೆಲಂಗಾಣದ ಕರೀಮ್ ನಗರ ನಿವಾಸಿಯಾಗಿದ್ದ Rub’ al Khali desertಮೃತ ದುರ್ದೈವಿ. ಈತ ಕಳೆದ ಮೂರು ವರ್ಷಗಳಿಂದ ಸೌದಿ ಅರೇಬಿಯಾದ ದೂರ ಸಂವಹನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಜಗತ್ತಿನ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದು ಎಂದೇ ಹೇಳಲಾಗಿರುವ ರಬ್ ಅಲ್ ಖಲಿ ಮರುಭೂಮಿಯ ಎಂಪ್ಟಿ ಕ್ವಾರ್ಟರ್ ಎಂಬ ನಿರ್ಜನ ಭಾಗದಲ್ಲಿ ಸಿಲುಕಿಕೊಂಡ ಶೆಹಜಾದ್ ಖಾನ್ ಜೀವ ಕಳೆದುಕೊಂಡಿದ್ದಾನೆ.
650 ಕಿಮೀಗೂ ಅಧಿಕ ವಿಸ್ತಾರ ಪ್ರದೇಶದಲ್ಲಿ ಚಾಚಿಕೊಂಡಿರುವ ರಬ್ ಅಲ್ ಖಲಿ ಮರುಭೂಮಿ, ಸೌದಿ ಅರೇಬಿಯಾದ ದಕ್ಷಿಣ ಪ್ರದೇಶ ಹಾಗೂ ನೆರೆಯ ದೇಶಗಳವರೆಗೂ ಹರಡಿದೆ. ಇಲ್ಲಿನ ಕಠೋರ ವಾತಾವರಣ ಪರಿಸ್ಥಿತಿ ಕಾರಣದಿಂದ ಇದನ್ನು ‘ನಟೋರಿಯಸ್’ ಜಾಗ ಎಂದೇ ಕರೆಯಲಾಗುತ್ತದೆ.
ಸುಡಾನ್ ದೇಶದ ಪ್ರಜೆ, ಸಹೋದ್ಯೋಗಿಯೊಬ್ಬರ ಜತೆ ಶೆಹಜಾದ್ ಖಾನ್ ಮರಳುಗಾಡಿನ ಪ್ರಯಾಣದ ಅನುಭವ ಪಡೆಯಲು ತೆರಳಿದ್ದ. ಆದರೆ ಅವರ ಜಿಪಿಎಸ್ ಸಿಗ್ನಲ್ ಕೈಕೊಟ್ಟ ಪರಿಣಾಮ ಇಬ್ಬರೂ ಅಪಾಯಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ, ಒಂದರ ಮೇಲೊಂದರಂತೆ ಸಮಸ್ಯೆಗಳು ಎದುರಾಗಿವೆ. ಶೆಹಜಾದ್‌ನ ಮೊಬೈಲ್ ಫೋನ್ ಬ್ಯಾಟರಿ ಡೆಡ್ ಆಗಿದ್ದರಿಂದ ಅವರಿಬ್ಬರೂ ಸಹಾಯಕ್ಕಾಗಿ ಕರೆ ಮಾಡುವುದು ಸಾಧ್ಯವಾಗಿರಲಿಲ್ಲ. ದಾರಿ ಹುಡುಕುವ ಪ್ರಯತ್ನದಲ್ಲಿ ಅವರ ವಾಹನದ ಇಂಧನ ಕೂಡ ಖಾಲಿಯಾಗಿದೆ. ಬೆಂಕಿಯಂತೆ ಸುಡುತ್ತಿರುವ ಬಿಸಿಲ ತಾಪ ಒಂದೆಡೆಯಾದರೆ, ಬಾಯಾರಿಕೆ ದಣಿವು ತಣಿಸಿಕೊಳ್ಳಲು ನೀರು ಮತ್ತು ಆಹಾರ ಇಲ್ಲದೆ ಒದ್ದಾಡಿದ್ದಾರೆ. ತಾಪಮಾನ ಸಹಿಲಾಗದಷ್ಟು ವಿಪರೀತ ಮಟ್ಟಕ್ಕೆ ತಲುಪಿದಾಗ ಜೀವ ಉಳಿಸಿಕೊಳ್ಳಲು ಇಬ್ಬರೂ ಶಕ್ತಿಮೀರಿ ಹೋರಾಡಿದ್ದಾರೆ. ಆದರೆ ಪ್ರಕೃತಿ ಮುಂದೆ ಅವರ ಪ್ರಯತ್ನ ಸಫಲವಾಗಿಲ್ಲ. ಅವರ ಬಳಿ ಒಂದು ಹನಿಯೂ ನೀರು ಉಳಿದಿರಲಿಲ್ಲ. ಒಣಗುತ್ತಿದ್ದ ಗಂಟಲನ್ನು ತೇವ ಮಾಡಿಕೊಳ್ಳಲಾಗದಷ್ಟು ಇಡೀ ದೇಹ ಒಣಗಿತ್ತು. ನಿರ್ಜಲೀಕರಣ ಹಾಗೂ ಬಳಲಿಕೆಯಿಂದ ಹೈರಾಣಾದ ಇಬ್ಬರೂ ಅಲ್ಲಿಯೇ ದಾರುಣ ಅಂತ್ಯ ಕಂಡಿದ್ದಾರೆ.ನಾಲ್ಕು ದಿನಗಳ ಬಳಿಕ, ಕಳೆದ ಗುರುವಾರ ಶೆಹಜಾದ್ ಮತ್ತು ಆತನ ಸಹೋದ್ಯೋಗಿಯ ಶವಗಳು ಮರಳಿದ ದಿಬ್ಬಗಳ ನಡುವೆ ನಿಂತಿದ್ದ ಅವರ ವಾಹನದ ಪಕ್ಕದಲ್ಲಿ ಪತ್ತೆಯಾಗಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *