Connect with us

  LATEST NEWS

  ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿ ಚರಣ್​ ಅರೆಸ್ಟ್

  ಮಧ್ಯಪ್ರದೇಶ , ಡಿಸೆಂಬರ್ 30: ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಆರೋಪದ ಅಡಿಯಲ್ಲಿ ಧಾರ್ಮಿಕ ಮುಖಂಡ ಕಾಳಿಚರಣ್​ ಅಲಿಯಾಸ್​ ಅಭಿಜಿತ್​ ಸರಾಗ್​ರನ್ನು ಮಧ್ಯಪ್ರದೇಶ ಖಜುರಾಹೋದಲ್ಲಿ ಪೊಲೀಸರು ಬಂಧಿಸಿದ್ದಾರೆ.‌

  ಡಿಸೆಂಬರ್​ 26ರಂದು ನಡೆದ ಧಾರ್ಮಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಕಾಳಿ ಚರಣ್,​​ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಹಾಡಿ ಹೊಗಳಿದ್ದರು. ಧರ್ಮವನ್ನು ರಕ್ಷಿಸುವ ಸಲುವಾಗಿ ಕಟ್ಟಾ ಹಿಂದೂ ನಾಯಕನನ್ನು ಸರ್ಕಾರದ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿ ಎಂದು ಹೇಳಿದ್ದರು.

  ಕಾಳಿಚರಣ್​​ ಮಧ್ಯಪ್ರದೇಶದ ಖಜುರಾಹೊದಿಂದ 25 ಕಿಮೀ ದೂರದಲ್ಲಿರುವ ಬಾಗೇಶ್ವರ್ ಧಾಮ್ ಬಳಿ ಬಾಡಿಗೆ ವಸತಿಗೃಹದಲ್ಲಿ ತಂಗಿದ್ದರು. ಇಂದು ಮುಂಜಾನೆ 4 ಗಂಟೆಗೆ ರಾಯ್‌ಪುರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕಾಳಿ ಚರಣ್​ ವಿರುದ್ಧ ಐಪಿಸಿ ಸೆಕ್ಷನ್​ 294,295 ಎ,298,505(2) ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಕೇಸ್​ ದಾಖಲಿಸಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply