FILM
ರೀಲ್ಸ್ ಗಾಗಿ ಲಾಂಗ್ ಮಚ್ಚು ಹಿಡಿದು ಪೋಸ್ – ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ಗೌಡ, ರಜತ್ ಕಿಶನ್ ಮೇಲೆ ಕೇಸ್

ಬೆಂಗಳೂರು ಮಾರ್ಚ್ 24: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಗಾಗಿ ಲಾಂಗ್, ಮಚ್ಚು ಹಿಡಿದು ಪೋಸ್ ನೀಡಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ಗೌಡ, ರಜತ್ ಕಿಶನ್ ಮೇಲೆ ಕೇಸ್ ದಾಖಲಾಗಿದೆ.
ಬೆಂಗಳೂರಿನ ಬಸವೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಗ್ಲಾಸ್, ಕೈಯಲ್ಲಿ ಲಾಂಗು ಹಿಡಿದು ನಟ ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಸ್ಲೋ ಮೋಷನ್ ವಾಕ್ ಮಾಡಿದ್ದರು. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

ಇದೀಗ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಸದ್ಯದಲ್ಲೇ ತನಿಖೆಗೆ ಆರೋಪಿಗಳನ್ನು ಕರೆಸಿಕೊಳ್ಳಲಿದ್ದಾರೆ. ವಿಡಿಯೋ ನೋಡಿದ ಸಾರ್ವಜನಿಕರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಬೆನ್ನಲ್ಲೇ ರಜತ್ ಕಿಶನ್ ಅವರ ಇನ್ಸ್ಟಾಗ್ರಾಮ್ನಿಂದ ಆ ರೀಲ್ಸ್ ಡಿಲೀಟ್ ಆಗಿದೆ.
1 Comment