KARNATAKA
ಬೆಂಗಳೂರು ವಿಮಾನ ನಿಲ್ದಾಣ – 17 ಕಾಳಿಂಗ ಸರ್ಪ ಸೇರಿದಂತೆ 55 ಜೀವಂತ ಹೆಬ್ಬಾವು ಸ್ಮಗ್ಲಿಂಗ್….!!

ಬೆಂಗಳೂರು ಸೆಪ್ಟೆಂಬರ್ 07: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜೀವಂತವಾಗಿರುವ 17 ಕಾಳಿಂಗ ಸರ್ಪ 55 ಹೆಬ್ಬಾವು ಸೇರಿದಂತೆ 78 ಪ್ರಾಣಿಗಳನ್ನು ಕಳ್ಳ ಸಾಗಾಣಿಗೆಯನ್ನು ಪತ್ತೆ ಹಚ್ಚಿದ್ದಾರೆ.
ಬ್ಯಾಕಾಂಕ್ ನಿಂದ ಎರ್ ಏಶಿಯಾ ವಿಮಾನದಲ್ಲಿ ಬಂದ್ ಬ್ಯಾಗೇಜ್ ನ್ನು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಗ್ ಗಳಲ್ಲಿ 17 ಕಾಳಿಂಗ ಸರ್ಪ 55 ಬಾಲ್ ಹೆಬ್ಬಾವು, 6 ಮಂಗಗಳು ಇದ್ದವು, ಅದರಲ್ಲಿ ಮಂಗಗಳು ಸಾವನಪ್ಪಿದ್ದು, ಮತ್ತೆ ಉಳಿದ ಪ್ರಾಣಿಗಳು ಜೀವಂತ ಇದ್ದವು.

1962 ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110 ರ ಅಡಿಯಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೀವಂತ ಪ್ರಾಣಿಗಳನ್ನು ಮೂಲದ ದೇಶಕ್ಕೆ ಗಡೀಪಾರು ಮಾಡಲಾಗಿದೆ ಮತ್ತು ಸತ್ತ ಪ್ರಾಣಿಗಳನ್ನು ಸರಿಯಾದ ನೈರ್ಮಲ್ಯ ಕ್ರಮಗಳೊಂದಿಗೆ ವಿಲೇವಾರಿ ಮಾಡಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.