LATEST NEWS
ತನ್ನ ಮೇಲೆ ಕಾರು ಹರಿದರೂ ಬದುಕುಳಿದ 3 ವರ್ಷದ ಮಗು

ಮುಂಬೈ : ಆಟ ಆಡುತ್ತಿದ್ದ 3 ವರ್ಷದ ಕಂದಮ್ಮನ ಮೇಲೆ ಕಾರು ಹರಿದರು ಪವಾಡ ರೀತಿಯಲ್ಲಿ ಪಾರಾದ ಅಚ್ಚರಿಯ ಘಟನೆ ಮುಂಬೈನ ಮಲ್ವಾನಿ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಇದೇ ತಿಂಗಳ 11 ರಂದು ನಡೆದಿದೆ.ಮೂರು ವರ್ಷದ ಬಾಲಕ ಮನೆ ಮುಂದೆ ತನ್ನ ಪಾಡಿಗೆ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ಬಂದ ಕಾರು ಆತನ ಮೇಲೆಯೇ ಹರಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಘಟನೆಯಿಂದ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇರಿಸಿಕೊಂಡಿದ್ದಾನೆ. ಅಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಪ್ರಕರಣ ಸಂಬಂಧ ಕಾರು ಡ್ರೈವರ್ ವಿರುದ್ಧ ಕೇಸ್ ದಾಖಲಾಗಿದೆ.
#WATCH Maharashtra: A car ran over a 3-year-old child while he was playing outside his house in Mumbai's Malvani area. (11.09.2020)
The child survived the accident and has been discharged from hospital. Police have registered a case against the driver. pic.twitter.com/rdI7xbzqpg
— ANI (@ANI) September 16, 2020