Connect with us

    DAKSHINA KANNADA

    ವಿಶ್ವ ಸೌಂದರ್ಯ ಸ್ಪರ್ಧೆಗೆ ಮಂಗಳೂರಿನ ವೈದ್ಯ ಚೆಲುವೆಯರು ಆಯ್ಕೆ..!

    ಮಂಗಳೂರು: ಈ ಬಾರಿಯ ವಿಶ್ವ ಸೌಂದರ್ಯ ಸ್ಪರ್ಧೆಗೆ  ಕರಾವಳಿ ಇಬ್ಬರು ವೈದ್ಯ ಬೆಡಗಿಯರು ಆಯ್ಕೆಯಾಗಿದ್ದಾರೆ.ಫಿಲಿಪ್ಪಿನ್ಸ್​​ನಲ್ಲಿ ಈ ವರ್ಷಾಂತ್ಯ ನಡೆಯುವ ಸೌಂದರ್ಯ ಸ್ಪರ್ಧೆಗೆ  ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮತ್ತು ಡಾ.ಶ್ರುತಿ ಬಲ್ಲಾಳ್ ಆಯ್ಕೆಯಾಗಿದ್ದಾರೆ.

    ಈಚೆಗೆ ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ನಡೆದ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾದ 8ನೇ ಆವೃತ್ತಿಯ ಫ್ಯಾಷನ್‌ ಶೋ ಕಿರೀಟವನ್ನು ಮುಡಿಗೇರಿಸಿಕೊಂಡು, ಇವರು ಅಂತಾರಾಷ್ಟ್ರೀಯ ಸೌಂದರ್ಯ‌ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇಂಡಿಪೆಂಡೆಂಟ್ ಇಂಡಿಯಾ ಇಂಟರ್ ನ್ಯಾಷನಲ್​ ವಿಭಾಗದಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್, ಅರ್ಥ್ ಇಂಡಿಯಾ ಇಂಟರ್​ನ್ಯಾಷನಲ್​​ ವಿಭಾಗದಲ್ಲಿ ಡಾ.ಶ್ರುತಿ ಬಲ್ಲಾಳ್ ಅವರು ವಿಜೇತರಾಗಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್‌ ಶೋದಲ್ಲಿ ಪಾಲ್ಗೊಂಡಿದ್ದರು.

    ವಿಶೇಷ ಅಂದ್ರೆ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮಂಗಳೂರಿನಲ್ಲಿ ಹೆರಿಗೆ ತಜ್ಞೆಯಾಗಿದ್ದಾರೆ. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಾಡೆಲಿಂಗ್​​ನಲ್ಲಿ ಆಸಕ್ತಿ ಹೊಂದಿರುವ ನಿಶಿತಾ ಮಂಗಳೂರಿನಲ್ಲಿ ನಡೆದ ಮೊದಲ ವೈದ್ಯರ ಫ್ಯಾಷನ್ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಆ ಬಳಿಕ ನಿರಂತರವಾಗಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ, ಡಾ.ಶ್ರುತಿ ಬಲ್ಲಾಳ್​ ಅವರೂ ವಿವಾಹಿತರಾಗಿದ್ದು, ಇಬ್ಬರು ಮಕ್ಕಳ ತಾಯಿ. ಮಧುಮೇಹ ತಜ್ಞೆಯಾಗಿರುವ ಇವರು ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯ ಕುಟುಂಬದ ಶ್ರುತಿ ಮಾಡೆಲಿಂಗ್​​ನಲ್ಲಿ ತೊಡಗಿಸಿಕೊಂಡಿದ್ದು, ಮಿಸೆಸ್ ಇಂಡಿಯಾ ಅರ್ಥ್ ಇಂಟರ್​​ನ್ಯಾಷನಲ್, ಮಿಸೆಸ್ ಇಂಡಿಯಾ ಕರ್ನಾಟಕ ವಿವಾಸಿಯಸ್, ಮಿಸೆಸ್ ಇಂಡಿಯಾ ಕರ್ನಾಟಕ ಇನೊವೇಟಿವ್ ಫರ್ಪಾಮರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನವೆಂಬರ್​​ನಲ್ಲಿ ಫಿಲಿಫೈನ್ಸ್​​ನಲ್ಲಿ ನಡೆಯುವ ಇಂಡಿಪೆಂಡೆಂಟ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಪಾಲ್ಗೊಂಡರೆ, ಡಿಸೆಂಬರ್​ನಲ್ಲಿ ಅಲ್ಲಿಯೇ ನಡೆಯುವ ಅರ್ಥ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಡಾ.ಶ್ರುತಿ ಬಲ್ಲಾಳ್ ಭಾಗವಹಿಸಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply