LATEST NEWS
ವಾರಣಾಸಿ – 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅ*ತ್ಯಾ*ಚಾರ

ವಾರಣಾಸಿ ಎಪ್ರಿಲ್ 08: ವಾರಣಾಸಿಯಲ್ಲಿ ಕಳೆದ ತಿಂಗಳು ಮನೆಯಿಂದ ನಾಪತ್ತೆಯಾಗಿದ್ದ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ತಂದೆಯ ದೂರಿನ ಮೇರೆಗೆ ಲಾಲ್‌ಪುರ ಪಾಂಡೆಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹುಕುಲ್‌ಗಂಜ್ ಮತ್ತು ಲಲ್ಲಾಪುರ ಪ್ರದೇಶಗಳ ಆರು ಆರೋಪಿಗಳನ್ನು ಅದೇ ರಾತ್ರಿ ವಶಕ್ಕೆ ಪಡೆಯಲಾಗಿದೆ.
ಸಂತ್ರಸ್ತೆ ಮಾರ್ಚ್ 29 ರಂದು ತನ್ನ ಸ್ನೇಹಿತನೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಳು. ಆದರೆ ಎಂದಿನಂತೆ ಮನೆಗೆ ವಾಪಾಸ್ ಆಗದ ಕಾರಣ ಅಕೆಯ ಪೋಷಕರು ಎಪ್ರಿಲ್ 4 ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಂತರ ಸಂತ್ರಸ್ತೆ ಪಾಂಡೆಪುರ ಛೇದಕದಲ್ಲಿ ಪತ್ತೆಯಾಗಿದ್ದು, ಅಲ್ಲಿ ಆರೋಪಿಗಳು ಆಕೆಯನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ನಂತರ, ಸಂತ್ರಸ್ತೆ ತನ್ನ ತಂದೆಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಕೇಸ್ ದಾಖಲಿಸಾಗಿದೆ.

ವರುಣಾ ವಲಯದ ಡಿಸಿಪಿ ಚಂದ್ರಕಾಂತ್ ಮೀನಾ ಅವರು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರು ಆರೋಪಿಗಳು ಅರೆಸ್ಟ್ ಆಗದ್ದಾರೆ ಎಂದು ತಿಳಿಸಿದ್ದಾರೆ. ಸಂತ್ರಸ್ತಳ ಕುಟುಂಬವು ಮಾರ್ಚ್ 29 ರಂದು ಆಕೆ ಕಾಣೆಯಾಗಿದ್ದಾಳೆಂದು ಆರಂಭದಲ್ಲಿ ದೂರು ನೀಡಿತ್ತು. ಏಪ್ರಿಲ್ 4 ರಂದು ಪೊಲೀಸರು ಆಕೆಯನ್ನು ಪತ್ತೆ ಹಚ್ಚಿದರು. ಸಂತ್ರಸ್ತೆಯಾಗಲಿ ಅಥವಾ ಆಕೆಯ ಕುಟುಂಬವಾಗಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿರಲಿಲ್ಲ. ಏಪ್ರಿಲ್ 6 ರಂದು ಮಾತ್ರ ಅತ್ಯಾಚಾರ ದೂರು ದಾಖಲಾಗಿದೆ” ಎಂದು ಅವರು ಹೇಳಿದರು. ಸಂತ್ರಸ್ತೆ ಅಪ್ರಾಪ್ತ ವಯಸ್ಕಳು ಎಂದು ಸೂಚಿಸುವ ಮಾಧ್ಯಮ ವರದಿಗಳನ್ನು ಡಿಸಿಪಿ ಮೀನಾ ಉಲ್ಲೇಖಿಸಿ, ಸಂತ್ರಸ್ತೆಗೆ 19 ವರ್ಷ ವಯಸ್ಸಾಗಿದೆ ಎಂದು ಸ್ಪಷ್ಟಪಡಿಸಿದರು.
2 Comments