LATEST NEWS
ಪ್ರಜ್ಞೆ ತಪ್ಪಿ ಬಿದ್ದಿದ್ದ ಹಾವಿನ ಬಾಯಿಗೆ ಬಾಯಿ ಹಾಕಿ ಕೃತಕ ಉಸಿರಾಟ ನೀಡಿ ಬದುಕಿಸಿದ ಪೊಲೀಸ್ ಅಧಿಕಾರಿ
ಮಧ್ಯಪ್ರದೇಶ ಅಕ್ಟೋಬರ್ 26 : ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮನುಷ್ಯನಿಗೆ ಸಿಪಿಆರ್ ಮಾಡದ ಇಂದಿನ ಕಾಲದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹಾವಿನ ಬಾಯಿಗೆ ಬಾಯಿ ಹಾಕಿ ಕೃತಕ ಉಸಿರಾಟ ನೀಡಿ ಜೀವ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಮಿನಾಶಕ ಬೆರೆಸಿದ ನೀರಿನಲ್ಲಿ ಮುಳುಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹಾವಿಗೆ ಸಿಪಿಆರ್ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ನರ್ಮದಾಪುರ ಜಿಲ್ಲೆಯ ಸೆಮಾರಿ ಹರಿಚಂದನ್ ಎನ್ನುವ ನಗರದಲ್ಲಿ. ಹಾವನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಯನ್ನು ಅತುಲ್ ಶರ್ಮಾ ಎಂದು ಗುರುತಿಸಲಾಗಿದೆ.
ವಿಷಪೂರಿತ ಹಾವು ವಸತಿ ಕಾಲೋನಿಯ ಪೈಪ್ಲೈನ್ಗೆ ಪ್ರವೇಶಿಸಿದೆ ಎಂದು ವರದಿಯಾಗಿದೆ. ಹಾವನ್ನು ಪೈಪ್ಲೈನ್ನಿಂದ ತೆಗೆಯಲು ನಿವಾಸಿಗಳು ವಿಫಲವಾದಾಗ, ಅವರು ಕೀಟನಾಶಕ ಬೆರೆಸಿದ ನೀರನ್ನು ಕೆಳಗೆ ಸುರಿದರು. ಇದರಿಂದ ಹಾವು ಪ್ರಜ್ಞೆ ತಪ್ಪಿ ಬಿದ್ದಿದೆ.
ಪೊಲೀಸ್ ಅಧಿಕಾರಿಯು ಮೊದಲು ಹಾವಿನ ಉಸಿರಾಟದ ಬಗ್ಗೆ ಪರೀಕ್ಷಿಸುತ್ತಾರೆ. ಬಳಿಕ ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರಾಡುತ್ತಾರೆ, ನಂತರ ಅದರ ತಲೆ ಮೇಲೆ ನೀರು ಹಾಕಿ, ಮತ್ತೆ ಕೃತಕ ಉಸಿರಾಟ ನಡೆಸುತ್ತಾರೆ. ಕ್ಷಣದಲ್ಲೇ ಹಾವು ಎಚ್ಚರಗೊಳ್ಳುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ವಿಡಿಯೊ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.