DAKSHINA KANNADA
ದಕ್ಷಿಣ ಕನ್ನಡದಲ್ಲಿ ಮಳೆಯಿಂದ 83 ಶಾಲೆಗಳಿಗೆ ಹಾನಿ, ಮೂರು ಕೋಟಿ ರೂ. ನಷ್ಟ..!
ಮಳೆಯಿಂದ ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 83 ಶಾಲೆಗಳಿಗೆ ಹಾನಿಯಾಗಿದ್ದು ಸುಮಾರು ಮೂರು ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲದಿನಗಳಿಂದ ಆರ್ಭಟಿಸುತ್ತಿದ್ದ ವರುಣನ ಆರ್ಭಟ ಕೊಂಚ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮಂಗಳವಾರ ಮಳೆಯ ಮಳೆಯ ಆರ್ಭಟ ಕೊಂಚ ತಣಿದಿತ್ತು.
ಆದರೆ ಇದುವರೆಗೆ ಸುರಿದ ಮಳೆ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಮಳೆಯಿಂದ ಇದುವರೆಗೆ ಜಿಲ್ಲೆಯಲ್ಲಿ 83 ಶಾಲೆಗಳಿಗೆ ಹಾನಿಯಾಗಿದ್ದು ಸುಮಾರು ಮೂರು ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕೆಲವು ಶಾಲೆಗಳಿಗೆ ತೀವ್ರ ಹಾನಿಯಾದರೆ, ಇನ್ನು ಕೆಲವೆಡೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಕೆಲವಡೆ ಛಾವಣಿಯಿಂದ ನೀರು ಸೋರಿಕೆ ಆಗುತ್ತಿದ್ದು ಮಕ್ಕಳು ಕುಳಿತುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಪಾಠ ಮಾಡದಂತೆ ಜಿಲ್ಲಾಡಳಿತ ಸೂಚಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಹಾನಿಯಾಗಿರುವ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ83 ಶಾಲೆಗಳನ್ನು ಸೇರಿಸಲಾಗಿದೆ. ಬಂಟ್ವಾಳದಲ್ಲಿಅತಿ ಹೆಚ್ಚು 49 ಶಾಲೆಗಳಿಗೆ ಹಾನಿಯಾದರೆ . ಉಳ್ಳಾಲದಲ್ಲಿ12 ಶಾಲೆಗಳಿಗೆ ಹಾನಿಯಾಗಿದೆ.