Connect with us

    National

    ಬಿಹಾರದಲ್ಲಿ 83 ಜನರನ್ನು ಬಲಿ ಪಡೆದ ಸಿಡಿಲು….!!

    ಬಿಹಾರ ಜೂನ್ 25: 2020 ದೇಶಕ್ಕೆ ಗಂಡಾತರದ ಕಾಲವಾಗಿ ಮಾರ್ಪಟ್ಟಿದೆ. ಒಂದೆಡೆ ಕೊರೊನಾದಿಂದಾಗಿ ದೇಶ ಕಂಗೆಟ್ಟಿದ್ದರೆ. ಇನ್ನೊಂದೆ ಪ್ರಕೃತಿ ತನ್ನ ರೌದ್ರಾವತಾರ ತೋರುತ್ತಿದ್ದಾಳೆ. ಇದಕ್ಕೆ ಉತ್ತಮ ಉದಾಹರಣೆ ಬಿಹಾರದಲ್ಲಿ ಇಂದು ನಡೆದ ಘಟನೆ. ಬಿಹಾರದಲ್ಲಿ ಮಳೆ ಮತ್ತು ಸಿಡಿಲಿಗೆ ಒಂದೇ ದಿನ 83 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಧ್ಯಾಹ್ನದ 22 ಇದ್ದ ಸಾವಿನ ಸಂಖ್ಯೆ ರಾತ್ರಿ ಹೊತ್ತಿಗೆ 83ಕ್ಕೆ ಏರಿಕೆಯಾಗಿದೆ. ಬಿಹಾರದ ಗೋಪಾಲ್‌ ಗಂಜ್‌ ಜಿಲ್ಲೆಯೊಂದರಲ್ಲೇ 13 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ನವಾಡದಲ್ಲಿ 8 ಮಂದಿ ಸತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

    ಸಿಡಿಲಿನಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನೇತೃತ್ವದ ಸರ್ಕಾರ ತಲಾ 4 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸಿಡಿಲು ಮತ್ತು ಮಳೆಗೆ ಹಲವು ಜೀವಗಳು ಬಲಿಯಾದ ದುರಂತಮಯ ಸುದ್ದಿ ತಿಳಿಯಿತು. ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *