Connect with us

    LATEST NEWS

    ಆಳಸಮುದ್ರದಲ್ಲಿ ಕೆಟ್ಟು ನಿಂತ ಮೀನುಗಾರಿಕಾ ಬೋಟ್ ನಿಂದ 8 ಮಂದಿ ಮೀನುಗಾರರ ರಕ್ಷಣೆ

    ಮೀನುಗಾರಿಕೆ

    ಆಳಸಮುದ್ರದಲ್ಲಿ ಕೆಟ್ಟು ನಿಂತ ಮೀನುಗಾರಿಕಾ ಬೋಟ್ ನಿಂದ 8 ಮಂದಿ ಮೀನುಗಾರರ ರಕ್ಷಣೆ

    ಮಂಗಳೂರು ಸೆಪ್ಟೆಂಬರ್ 20: ಆಳಸಮುದ್ರ ಮೀನುಗಾರಿಕೆಗೆ ತೆರಳಿ ಸಮುದ್ರ ಮಧ್ಯದಲ್ಲಿ ಕೆಟ್ಟು ನಿಂತ ಮೀನುಗಾರಿಕಾ ಬೋಟ್ ನಿಂದ 8 ಮಂದಿ ಮೀನುಗಾರರು ಹಾಗೂ ಬೋಟ್ ನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ.

    ಕಾರವಾರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶ್ರೀದುರ್ಗಾ ಎಂಬ ಹೆಸರಿನ ಬೋಟ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೋಟ್ ಅಪಾಯ ಸ್ಥಿತಿಗೆ ತಲುಪಿತ್ತು. ಈ ಹಿನ್ನಲೆಯಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸಲು ಆಗದ ಕಾರಣ ಬೋಟ್ ನಲ್ಲಿ ಮೀನುಗಾರರು ಕಾರವಾರ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ಪಡೆದ ಮೀನುಗಾರಿಕಾ ಇಲಾಖೆ ಮೀನುಗಾರರ ರಕ್ಷಣೆಗೆ ಭಾರತೀಯ ಕೋಸ್ಟ್ ಗಾರ್ಡ್ ನ ಸಹಾಯ ಕೇಳಿದೆ. ಕೂಡಲೇ ಕಾರ್ಯಪ್ರವೃತರಾದ ಭಾರತೀಯ ಕೋಸ್ಟ್ ಗಾರ್ಡ್ ಮೀನುಗಾರರ ರಕ್ಷಣೆಗೆ ಗಾಗಿ ಕೋಸ್ಟ್ ಗಾರ್ಡ್ ಶಿಫ್ ಸಿ-446 ನ್ನು ಕಳುಹಿಸಿಕೊಟ್ಟಿದೆ.

    ಕೋಸ್ಟ್ ಗಾರ್ಡ್ ಶಿಫ್ ನಲ್ಲಿ ತಂತ್ರಜ್ಞರು ಕೆಟ್ಟು ನಿಂತ ಶ್ರೀದುರ್ಗಾ ಮೀನುಗಾರಿಕಾ ಬೋಟ್ ನ ರಿಪೇರಿಗೆ ಪ್ರಯತ್ನಿಸಿದ್ದಾರೆ. ಆದರೆ ಬೋಟ್ ರಿಪೇರಿಯಾಗದ ಬೋಟ್ ನಲ್ಲಿದ್ದ 8 ಮಂದಿ ಮೀನಗಾರರ ರಕ್ಷಣೆ ಮಾಡಿದ್ದಾರೆ. ನಂತರ ಕೆಟ್ಟು ನಿಂತ ಶ್ರೀದುರ್ಗಾ ಹೆಸರಿ ಮೀನುಗಾರಿಕಾ ಬೋಟ್ ನ್ನು ಅಲ್ಲೆ ಮೀನುಗಾರಿಕೆ ನಡೆಸುತ್ತಿದ್ದ ಇನ್ನೊಂದು ಬೋಟ್ ಮೂಲಕ ಸಮುದ್ರ ತೀರಕ್ಕೆ ತರಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *