ಮಂಗಳೂರು

ಸೆಪ್ಟೆಂಬರ್ 26 ರಿಂದ ಸರಣಿ ಬ್ಯಾಂಕ್ ರಜೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಹಣ ಸಿಗುವುದು ಕಷ್ಟ

ಮಂಗಳೂರು ಸೆಪ್ಟೆಂಬರ್ 20: ಸಾರ್ವಜನಿಕ ಬ್ಯಾಂಕ್ ಗಳ ವಿಲೀನ ವಿರೋಧಿಸಿ ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಮುಷ್ಕರದ ಹಿನ್ನಲೆ ದೇಶದಾದ್ಯಂತ ಬ್ಯಾಂಕ್ ಗಳು 5 ದಿನ ಬಂದ್ ಆಗಲಿದ್ದು, ಎಟಿಎಂಗಳಲ್ಲಿ ಹಣ ಸಿಗುವುದು ಕಷ್ಟವಾಗುವ ಸಾಧ್ಯತೆ ಇದೆ.

ಸೆಪ್ಟೆಂಬರ್ 26ರಿಂದ ಸತತ ನಾಲ್ಕು ದಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಸಾರ್ವಜನಿಕ ವಲಯದ 10 ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಬ್ಯಾಂಕ್ ನೌಕರರ ನಾಲ್ಕು ಯೂನಿಯನ್‌ಗಳು ಸೆಪ್ಟೆಂಬರ್ 26 ಮತ್ತು 27ರಂದು ಮುಷ್ಕರಕ್ಕೆ ಕರೆ ನೀಡಿವೆ.

ಈ ಎರಡು ದಿನಗಳ ಮುಷ್ಕರದ ಬೆನ್ನಿಗೇ ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆ ಬರಲಿದ್ದು, ಸೆಪ್ಟೆಂಬರ್ 30ರಂದು ಬ್ಯಾಂಕ್‌ಗಳ ಅರ್ಧವಾರ್ಷಿಕ ಲೆಕ್ಕ ಚುಕ್ತಾ ದಿನ ಈ ಹಿನ್ನಲೆಯಲ್ಲಿ ಅಂದು ಕೂಡ ಬ್ಯಾಂಕ್‌ಗಳ ಬಾಗಿಲು ತೆರೆದಿದ್ದರೂ ಗ್ರಾಹಕರಿಗೆ ಸೇವೆ ದೊರೆಯದು.
ಹೀಗಾಗಿ ಸತತ ಐದು ದಿನ ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಹಣ ಸಂದಾಯ, ಹಣ ಹಿಂಪಡೆಯುವುದು, ಡಿಡಿ ವ್ಯವಹಾರ ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಕಂಡುಬರಲಿದೆ. ಬ್ಯಾಂಕ್‌ಗಳ ಎಟಿಎಂಗಳಲ್ಲೂ ಹಣ ಸಿಗುವುದು ಕಷ್ಟ. ಸಾರ್ಜಜನಿಕರು ತಮಗೆ ಬೇಕಾದಷ್ಟು ಹಣವನ್ನು ಮೊದಲೇ ಡ್ರಾ ಮಾಡಿ ಇಟ್ಟುಕೊಳ್ಳುವುದು ಒಳಿತು.

Facebook Comments

comments