LATEST NEWS
ಉಡುಪಿ 7 ಪದವಿ ವಿಧ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ – ಹೋಮ್ ಐಸೋಲೇಶನ್ ಗೆ ಸೂಚನೆ

ಉಡುಪಿ ನವೆಂಬರ್ 20: ಪದವಿ ಕಾಲೇಜು ಶುರುವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಅಘಾತ ಉಂಟಾಗಿದ್ದು, ಉಡುಪಿಯಲ್ಲಿ ಒಟ್ಟು 7 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಆತಂಕ ಸೃಷ್ಠಿಯಾಗಿದೆ.
ಕೊರೊನಾ ಲಾಕ್ ಡೌನ್ ನಂತರ ಪ್ರಾರಂಭವಾದ ಪದವಿ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದ್ದು, ಉಡುಪಿಯಲ್ಲಿ ಮೂರು ದಿನದಲ್ಲಿ ಕಾಲೇಜು ಸಿಬ್ಬಂದಿ,ವಿದ್ಯಾರ್ಥಿಗಳು ಸೇರಿ 7000 ರಾಪಿಡ್ ಟೆಸ್ಟ್ ನಡೆಸಲಾಗಿದೆ. ಈವರೆಗೆ ಸುಮಾರು 4000 ಸಾವಿರ ವರದಿ ಬಂದಿದ್ದು, ಇನ್ನೂ 2000 ಸಾವಿರ ವರದಿ ಬರಲು ಬಾಕಿ ಇದ್ದು ಒಟ್ಟು 7 ವಿಧ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆದರೆ 7 ವಿಧ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದರೂ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಈ ಹಿನ್ನಲೆ 7 ವಿಧ್ಯಾರ್ಥಿಗಳಿಗೆ ಹೋಮ್ ಐಸೋಲೇಶ್ ನ ನಲ್ಲಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ.
