KARNATAKA
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ 7 ಮಂದಿ ಸಾವು

ಧಾರವಾಡ, ಮೇ 21:ಇಂದು ಬೆಳ್ಳಂಬೆಳಗ್ಗೆ ಮರಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 7 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ಬಾಡ್ ಗ್ರಾಮದ ಬಳಿ ಇಂದು ನಸುಕಿನ ಜಾವ ನಡೆದಿದೆ.
ಮೃತರನ್ನು ಅನನ್ಯ(14), ಹರೀಶ(13), ಶಿಲ್ಪಾ (34), ನೀಲವ್ವ(60), ಮಧುಶ್ರೀ(20), ಮಹೇಶ್ವರಯ್ಯ (11) ಹಾಗೂ ಶಂಭುಲಿಂಗಯ್ಯ (35) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಮೃತರೆಲ್ಲರು ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದವರೆಂದು ತಿಳಿದುಬಂದಿದೆ. ಎಲ್ಲರು ಮದುವೆ ಹೋಗಿದ್ದರು.

ನಿಗದಿ ಗ್ರಾಮದಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಮಳೆ ಕಾರಣ ಮನ್ಸೂರ ರೇವಣಸಿದ್ದೇಶ್ವರ ಮಠಕ್ಕೆ ಸಂಬಂಧಿ ಯುವಕನ ಮದುವೆ ಸ್ಥಳಾಂತರವಾಗಿತ್ತು. ಇಂದು ಮದುವೆ ನಡೆಯಬೇಕಿತ್ತು. ಮದುವೆ ಮುನ್ನಾ ದಿನದ ಇಳೆ ಕಾರ್ಯಕ್ಕೆ ಹೋಗಿದ್ದ. ಇಳೆ ಕಾರ್ಯದ ಊಟ ಮುಗಿಸಿ ಮತ್ತೆ ನಿಗದಿಗೆ ಬರುತ್ತಿದ್ದಾಗ ದುರಂತ ಘಟಿಸಿದೆ.
ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.