MANGALORE
SDPI ರಕ್ತದಾನ ಮಾಸಾಚರಣೆಯ ಮೂರನೇ ಭಾನುವಾರವಾದ ಇಂದು 620 ಯುನಿಟ್ ರಕ್ತ ಸಂಗ್ರಹ
ಮಂಗಳೂರು, ಮಾರ್ಚ್ 12: SDPI ರಕ್ತದಾನ ಮಾಸಾಚರಣೆಯ ಮೂರನೇ ಭಾನುವಾರ 620 ಯುನಿಟ್ ರಕ್ತ ಸಂಗ್ರಹಮಾಡಲಾಗಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಳೆದ ತಿಂಗಳು 22 ರಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ರಕ್ತ ಕೊಟ್ಟು ಬಾಂಧವ್ಯ ಕಟ್ಟು ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಮಾಸಾಚರಣೆಯ ಮೂರನೇ ಭಾನುವಾರವಾದ ಇಂದು ಸುಳ್ಯ, ಉಳ್ಳಾಲ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿ ವಿವಿಧ ಬ್ಲಡ್ ಬ್ಯಾಂಕ್ ಗಳ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಗಳಲ್ಲಿ ಒಟ್ಟು 620 ಯುನಿಟ್ ರಕ್ತ ಸಂಗ್ರಹಿಸಲಾಗಿದೆ.
ಇದರೊಂದಿಗೆ ಒಟ್ಟು 1230 ಯುನಿಟ್ ರಕ್ತವನ್ನು ವಿವಿಧ ಬ್ಲಡ್ ಬ್ಯಾಂಕ್ ಗಳಿಗೆ ಪೂರೈಸಲು ಸಾದ್ಯವಾಗಿದೆ ,
ಈ ಅಭಿಯಾನವು ಇನ್ನು ಒಂದು ವಾರಗಳ ಕಾಲ ನಡೆಯಲಿದೆ, ಇದರಲ್ಲಿ ಎಲ್ಲಾ ರಕ್ತದಾನಿಗಳು ಜಾತಿ ಮತ ಭೇದ ಮರೆತು ರಕ್ತದಾನ ಮಾಡುವ ಮೂಲಕ ಪುಣ್ಯಕಾರ್ಯದಲ್ಲಿ ಬಾಗಿಯಾಗಬೇಕೆಂದು ಅಭಿಯಾನದ ಜಿಲ್ಲಾ ಸಂಯೋಜಕರಾದ ಸುಹೈಲ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
You must be logged in to post a comment Login