Connect with us

    LATEST NEWS

    60 ನೇ ಜನ್ಮವರ್ಧಂತಿಗೆ 6 ಗೋಶಾಲೆ : ಪೇಜಾವರ ಶ್ರೀ ಕನಸು .

    ಉಡುಪಿ ,ಡಿಸೆಂಬರ್ 27: ಗೋರಕ್ಷಣೆಯ ಮೌನಕ್ರಾಂತಿಯನ್ನು ನಡೆಸುತ್ತಿರುವ ಶ್ರೀ ಪೇಜಾವರ ಮಠವು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಗಿಲ್ಲಾಳಿಯಲ್ಲಿ ತನ್ನ ನಾಲ್ಕನೇ ಗೋಶಾಲೆ ಆರಂಭಿಸಲು ಸಿದ್ಧತೆ ನಡೆಸಿದೆ .
    ಹೆಬ್ರಿಯ ಪ್ರಸಿದ್ಧ ವೈದಿಕ ಮನೆತನವಾಗಿರುವ ರಾಘವೇಂದ್ರ ಆಚಾರ್ಯ ಮತ್ತು ಕುಟುಂಬಸ್ಥರು ದಾನವಾಗಿ ನೀಡಿರುವ 7 ಎಕರೆ ಮತ್ತು ರಾಮಕೃಷ್ಣ ಆಚಾರ್ಯ ಎಂಬವರು ನೀಡಿರುವ 2 ಎಕ್ರೆ ಹೀಗೆ 9 ಎಕ್ರೆ ಅತ್ಯಂತ ಸುಂದರ ಪ್ರಾಕೃತಿಕ ಸೊಬಗಿನ ಭೂಮಿಯಲ್ಲಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯನ್ನು ಆರಂಭಿಸಲು ಸಕಲ ಸಿದ್ಧತೆ ನಡೆದಿದೆ . ಈ ಸಂಬಂಧ ಶನಿವಾರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಮುಂದಿನ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿದರು .

    ಶ್ರೀ ಮಠದ ಗೋವರ್ಧನಗಿರಿ ಟ್ರಸ್ಟ್ ನೇತೃತ್ವದಲ್ಲಿ ಈಗಾಗಲೇ ಉಡುಪಿಯ ನೀಲಾವರ , ಕೊಡವೂರು , ಹೆಬ್ರಿಯ ಕಬ್ಬಿನಾಲೆ ಸಮೀಪದಲ್ಲಿ ಹೀಗೆ ಮೂರು ಗೋಶಾಲೆಗಳು ಅತ್ಯಂತ ಯಶಸ್ವಿಯಾಗಿ ಸಮಾಜದ ಸಹೃದಯರ ಹಾಗೂ ಗೋಪ್ರೇಮಿಗಳ ಸಹಕಾರದೊಂದಿಗೆ ನಡೆಸಲ್ಪಡುತ್ತಿವೆ .

    ಈಗ 56 ರ ಹರೆಯದ ಶ್ರೀಗಳು ತನ್ನ 60 ನೇ ಜನ್ಮವರ್ಧಂತಿಯ ವೇಳೆಗೆ ಒಟ್ಟು 6 ಗೋಶಾಲೆಗಳನ್ನು ಸ್ಥಾಪಿಸಿ ಸಾವಿರಾರು ಗೋವುಗಳಿಗೆ ನೆಮ್ಮದಿಯ ಆಶ್ರಯ ಒದಗಿಸುವ ಕನಸು ಹೊಂದಿದ್ದಾರೆ .
    ಭಾನುವಾರ ಹೆಬ್ರಿ ಗಿಲ್ಲಾಳಿಯ ಗೋಶಾಲೆ ಪ್ರಾರಂಭವಾಗುವ ಸ್ಥಳದಲ್ಲಿ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ

    Share Information
    Advertisement
    Click to comment

    Leave a Reply

    Your email address will not be published. Required fields are marked *