Connect with us

    LATEST NEWS

    ಗೌರಿ ಲಂಕೇಶ್ ಹತ್ಯೆ ಪ್ರಕರಣ,ಸನಾತನ ಸಂಸ್ಥೆಯೇ ಟಾರ್ಗೆಟ್: ಸನಾತನ ಸಂಸ್ಥೆ ಆರೋಪ

     ಗೌರಿ ಲಂಕೇಶ್ ಹತ್ಯೆ ಪ್ರಕರಣ,ಸನಾತನ ಸಂಸ್ಥೆಯನ್ನು ಸಿಲುಕಿಸುವ ಸಂಚು : ಸನಾತನ ಸಂಸ್ಥೆ ಆರೋಪ

    ಬೆಂಗಳೂರು, ಅಕ್ಟೋಬರ್ 14 : ಪರ್ತಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳವು (ಎಸ್.ಐ.ಟಿ.) ಸನಾತನ ಸಂಸ್ಥೆಯನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದೆ ಎಂದು ಸನಾತನ ಸಂಸ್ಥೆ ಆರೋಪಿಸಿದೆ. ಈ ಬಗ್ಗೆ ಹೇಳಿಕೆಯೊಂದನ್ನು ಅದು ಬಿಡುಗಡೆ ಮಾಡಿದೆ.

    ಕೆಲ ಹಿಂದೂ ವಿರೋಧಿಗಳು ಹಾಗೂ ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಗೌರಿ ಲಂಕೇಶ ಹತ್ಯೆಯಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಲು ಹಾಗೂ ಸಂಸ್ಥೆಯ ಮಾನಹಾನಿ ಮಾಡಲು ಪ್ರಯತ್ನಿಸುತ್ತಿವೆ ಎಂದು ಅದು ಅಪಾದಿಸಿದೆ.

    ಪ್ರತ್ಯಕ್ಷದಲ್ಲಿ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಕೇವಲ ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸದೇ ವಿಶೇಷ ತನಿಖಾ ದಳಕ್ಕೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಬಿಡಬೇಕು. ಗೌರಿಯವರ ಹತ್ಯೆಯ ಹಿಂದೆ ಆರ್ಥಿಕ ಹಗರಣಗಳೇನಾದರೂ ಇಲ್ಲವಲ್ಲ, ನಕ್ಸಲ್‌ವಾದಿಗಳ ಸಂಬಂಧ ಹೀಗೆ ವಿವಿಧ ಆಯಾಮಗಳಿಂದ ತನಿಖೆಯಾಗಬೇಕು.

    ಮಹಾರಾಷ್ಟ್ರದಲ್ಲಿ ದಾಭೋಳಕರರ ಟ್ರಸ್ಟ್‌ನ ಹಗರಣಗಳು ಬಯಲಾಗಿದ್ದು ಅದರ ತನಿಖೆ ನಡೆಯುತ್ತಿದೆ. ಅದೇ ರೀತಿ ಕಾ.ಪಾನಸರೆಯವರ ಸಹಕಾರಿ ಸಂಸ್ಥೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅನಧಿಕೃತ 45 ಲಕ್ಷ ರೂ.ಗಳಿರುವುದು ಸಹ ಬೆಳಕಿಗೆ ಬಂದಿದೆ. ಗೌರಿ ಲಂಕೇಶ ಹತ್ಯೆಯ ನಂತರ ಹೊರಡುತ್ತಿರುವ ದೊಡ್ಡ ದೊಡ್ಡ ಮೆರವಣಿಗೆಗಳನ್ನು ಯಾರು ಪ್ರಾಯೋಜಿಸುತ್ತಿದ್ದಾರೆ ಎಂಬುದರ ತನಿಖೆಯಾಗಬೇಕು.

    ಈ ಬಗ್ಗೆ ಹೇಳಿಕೆ ನೀಡಿರುವ ಸನಾತನ ಸಂಸ್ಥೆಯ ವಕ್ತಾರ ಚೇತನ ರಾಜ ಹಂಸ ಮೊತ್ತಮೊದಲಿಗೆ ಯಾವುದೇ ಒತ್ತಡದ ತಂತ್ರಗಳಿಗೆ ಮಣಿಯದೇ ಸತ್ಯದ ಪಕ್ಷವನ್ನು ವಹಿಸಿದ ವಿಶೇಷ ತನಿಖಾ ದಳದವರನ್ನು ನಾವು ಅಭಿನಂದಿಸುತ್ತೇವೆ.

    ಯಾವುದೇ ಪುರಾವೆ ಇಲ್ಲದಿರುವಾಗ ಮತ್ತು ಸನಾತನ ಸಂಸ್ಥೆಯು ಸ್ಪಷ್ಟೀಕರಣ ನೀಡಿದ ನಂತರವೂ ಹಿಂದೂವಿರೋಧಿಗಳು ಮತ್ತು ಕೆಲವು ಪ್ರಸಾರ ಮಾಧ್ಯಮಗಳು ಮೊದಲನೆಯ ದಿನದಿಂದಲೇ ಸನಾತನ ಸಂಸ್ಥೆಯ ಹೆಸರನ್ನು ಗೌರಿ ಹತ್ಯೆಯೊಂದಿಗೆ ಜೋಡಿಸುತ್ತಿದ್ದವು.

    ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಸನಾತನದ ಮಾನಹಾನಿ ಮಾಡಲಾಯಿತು. ಎಸ್ ಐ ಟಿ ದಳದ ಮುಖ್ಯಸ್ಥರಾದ ಬಿ.ಕೆ.ಸಿಂಗ್  ‘ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸಹಭಾಗವಿರುವ ಮಾಹಿತಿ ಮಾಧ್ಯಮಗಳಲ್ಲಿದೆ.

    ನಮ್ಮಲ್ಲಿ ಇದು ವರೆಗೆ ಯಾವುದೇ ಸಂಸ್ಥೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ’, ಎಂದು ಸ್ಪಷ್ಟ ಪಡಿಸಿದ್ದಾರೆ ಎಂದ ಅವರು ಈ ಪ್ರಕರಣದಲ್ಲಿ ಸಂಬಂಧಿತರ ಮೇಲೆ ಕಾನೂನುರೀತ್ಯಾ ಕಾರ್ಯಾಚರಣೆಯನ್ನು ಮಾಡುವ ಬಗ್ಗೆ ಸನಾತನ ಸಂಸ್ಥೆಯು ವಕೀಲರ ಸಲಹೆಯನ್ನು ಪಡೆಯುತ್ತಿದೆ ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply