Connect with us

    DAKSHINA KANNADA

    ಗಲ್ಫ್ ರಾಷ್ಟ್ರಗಳಾದ ಕತಾರ್, ಕುವೈಟ್ ನಿಂದ 54ಟನ್ ಆಕ್ಸಿಜನ್ ಮಂಗಳೂರು ಬಂದರಿಗೆ..!

    ಮಂಗಳೂರು, ಮೇ 10:  ಇತ್ತೀಚೆಗೆ ಬಹರೈನ್​ನಿಂದ ಮಂಗಳೂರಿಗೆ 40 ಟನ್ ಆಕ್ಸಿಜನ್​ ಬಂದಿರುವ ಬೆನ್ನಲ್ಲೇ ಇಂದು ಕತಾರ್ ಮತ್ತು ಕುವೈತ್​ ದೇಶದಿಂದ 54 ಟನ್ ಆಕ್ಸಿಜನ್​ ಬಂದಿದೆ. ಭಾರತದೊಂದಿಗಿನ ಸಧೃಡ ಅಂತರಾಷ್ಟ್ರೀಯ ಭಾಂದವ್ಯದ ದ್ಯೋತಕವಾಗಿ ಕುವೈಟ್ ಸರಕಾರ ಎರಡು ಕಂಟೈನರ್ ಗಳಲ್ಲಿ ಮೆಡಿಕಲ್ ಆಕ್ಸಿಜನ್, ಟ್ಯಾಂಕ್ಸ್, ಮಂಗಳೂರಿನ ಎನ್ ಎಂ ಪಿಟಿ ಬಂದರಿಗೆ ತರಲಾಗಿದೆ.

    ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ, ಮತ್ತಿತರ ಪ್ರಮುಖರು ಹಡಗನ್ನು ಬರಮಾಡಿಕೊಂಡರು. ಭಾರತದಲ್ಲಿ ಕೋವಿಡ್ ಸೋಂಕಿನಿಂದ ಆಕ್ಸಿಜನ್ ಸಮಸ್ಯೆ ಕಾಣಿಸಿಕೊಂಡಿದ್ದು, ಹಲವು ರಾಷ್ಟ್ರಗಳು ಆಕ್ಸಿಜನ್ ನೆರವು ನೀಡುವಲ್ಲಿ ಮುಂದಾಗಿವೆ.

    ಗಲ್ಫ್ ರಾಷ್ಟ್ರಗಳಾದ ಕತಾರ್ ಮತ್ತು ಕುವೈಟಿನಿಂದ ಆಕ್ಸಿಜನ್ ನೆರವು ಬಂದಿದೆ. ಐಎನ್ ಎಸ್ ಕೋಲ್ಕತಾ ಹೆಸರಿನ ಕೋಸ್ಟ್ ಗಾರ್ಡ್ ಹಡಗಿನಲ್ಲಿ 27ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಕಂಟೈನರ್ ಗಳಲ್ಲಿ ಆಕ್ಸಿಜನ್ ಮಂಗಳೂರಿನ ಎನ್ ಎಂ ಪಿಟಿ ಬಂದರಿಗೆ ಬಂದಿದೆ.

    ಇದರ ಜೊತೆ 400 ಆಕ್ಸಿಜನ್ ಸಿಲಿಂಡರ್ 47 ಆಕ್ಸಿಜನ್ ಉತ್ಪಾದಿಸುವ ಸಣ್ಣ ಪ್ರಮಾಣದ ಕಾನ್ಸಂಟ್ರೇಟರ್ಸನ್ನು ಹೊತ್ತು ತಂದಿದೆ. ಒಂದು ವಾರದ ಹಿಂದೆ ಬಹರೈನ್ ನಿಂದ ಮಂಗಳೂರಿಗೆ 40ಮೆಟ್ರಿಕ್ ಟನ್ ಆಕ್ಸಿಜನ್ ತರಲಾಗಿತ್ತು. ಕ್ರೇನ್ ಬಳಸಿ ಅದನ್ನು ಹಡಗಿನಿಂದ ಇಳಿಸಲಾಗಿತ್ತು. ಅದನ್ನು  ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾಗಿದೆ.

    ಕುವೈಟ್ ಸರಕಾರ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದ್ದಾರೆ. ಈ ಹಿಂದೆ ಭಾರತ ಕುವೈಟಿಗೆ ಎರಡು ಲಕ್ಷ ಡೋಸ್ ಲಸಿಕೆಯನ್ನು ಕಳುಹಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    Video:

    Share Information
    Advertisement
    Click to comment

    Leave a Reply

    Your email address will not be published. Required fields are marked *