DAKSHINA KANNADA
200 ಕೆಜಿ ಚಿನ್ನಾಭರಣ ತೊಟ್ಟ ಕರಾವಳಿ ಬೆಡಗಿಯನ್ನು ಕಾಯಲು 50 ಜನ ಸೆಕ್ಯೂರಿಟಿ ಗಾರ್ಡ್..!

ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ 200 ಕೆಜಿ ಚಿನ್ನದ ಮುತ್ತುಗಳಿಂದ ಮಾಡಲ್ಪಟ್ಟ ಆಭರಣಗಳನ್ನು ಧರಿಸಿದ್ದರು ಎಂಬ ಮಾಹಿತಿ ಇದೀಗ ತುಂಬಾ ವರ್ಷಗಳ ಬಳಿಕ ಹೊರಬಿದ್ದಿದೆ.
ಮುಂಬೈ : ಬಾಲಿವುಡ್ ನಟಿ, ಬಚ್ಚನ್ ಮನೆ ಸೊಸೆ ಕರಾವಳಿಯ ಬೆಡಗಿ ನಟಿ ಐಶ್ವರ್ಯಾ ರೈ ಈಗಲೂ ಬಹುಬೇಡಿಕೆಯ ನಟಿಯಾಗಿದ್ದಾರೆ.

ವರ್ಷ 49 ಆದ್ರೂ ಇನ್ನೂ ಮಾಸದ ಆ ಸೌಂದರ್ಯಕ್ಕೆ ಮಾರು ಹೋಗದ ಜನರೇ ಇಲ್ಲ. ಇಂತಹ ಮಾಜಿ ವಿಶ್ವ ಸುಂದರಿಐಶ್ವರ್ಯಾ ರೈ ಸಿನೆಮಾ ಒಂದಕ್ಕೆ ಬೋಬ್ಬರಿ 200 ಕೆಜಿ ಆಭರಣ ಧರಿಸಿದ್ದರಂತೆ..!
ಅದು ಯಾವ ಸಿನಿಮಾ ಗೊತ್ತಾ?: 2008 ರಲ್ಲಿ ಬಿಡುಗಡೆಯಾದ ಜೋಧಾ ಅಕ್ಬರ್, ಹೃತಿಕ್ ರೋಷನ್, ಸೋನು ಸೂದ್, ನಿಕಿತಿನ್ ಧೀರ್ ಮತ್ತು ಇತರರೊಂದಿಗೆ ಐಶ್ವರ್ಯಾ ರೈ ಬಚ್ಚನ್ ನಟಿಸಿದ್ದರು.
ಐಶ್ವರ್ಯಾ ಮತ್ತು ಹೃತಿಕ್ ಪಾತ್ರ ಜನ ಮಾನಸದಲ್ಲಿ ಉಳಿದಿತ್ತು. ಈ ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ 200 ಕೆಜಿ ಚಿನ್ನದ ಮುತ್ತುಗಳಿಂದ ಮಾಡಲ್ಪಟ್ಟ ಆಭರಣಗಳನ್ನು ಧರಿಸಿದ್ದರು ಎಂಬ ಮಾಹಿತಿ ಇದೀಗ ತುಂಬಾ ವರ್ಷಗಳ ಬಳಿಕ ಹೊರಬಿದ್ದಿದೆ.
ಬರೋಬ್ಬರಿ 200 ಕೆಜಿ ಚಿನ್ನವನ್ನು ಮೈ ಮೇಲೆ ಹಾಕಿಕೊಂಡ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಈ ಎಲ್ಲಾ ಆಭರಣಗಳನ್ನು 70 ಮಂದಿ ಕುಶಲಕರ್ಮಿಗಳ ತಂಡ ತಯಾರಿಸಿದ್ದರಂತೆ.
ಬೆಲೆಬಾಳುವ ಆಭರಣಗಳನ್ನು ರಕ್ಷಿಸಲು 50 ಸಿಬ್ಬಂದಿಗಳ ರಕ್ಷಣಾ ತಂಡವನ್ನು ಕೂಡ ಐಶ್ವರ್ಯಾ ರೈ ಸುತ್ತ ನೇಮಿಸಲಾಗಿತ್ತು. 2008ರಲ್ಲಿ ಜೋಧಾ ಅಕ್ಬರ್ ಬಾಲಿವುಡ್ನಲ್ಲಿ ಮೂರನೇ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿ ಪ್ರೇಕ್ಷಕರ ಮನಗೆದ್ದಿದ್ದ ಸಿನಿಮಾವಾಗಿದ್ದು ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
ಅಜೀಮ್ ಓ ಶಾನ್ ಶಾಹೆನ್ಶಾ ಈ ಸಿನಿಮಾ ಹಾಡಿಗೆ ಅತ್ಯುತ್ತಮ ನೃತ್ಯ ಸಂಯೋಜನೆ ಮಾಡಿದ್ರು. ಸಿನಿಮಾ ಸಾಂಗ್ಗಳು ಕೂಡ ಸೂಪರ್ ಹಿಟ್ ಆಗಿತ್ತು. ಅನೇಕ ಸೂಪರ್ ಹಿಟ್ ಚಿತ್ರಗಳಳ್ಲಿ ನಡಿಸಿದ್ದ ಐಶ್ವರ್ಯ ರೈ ಕೆಲ ವರ್ಷ ತೆರೆಯಿಂದ ದೂರ ಸರಿದ್ದರು.
ಬಳಿಕ ಇತ್ತೀಚಿಗಷ್ಟೇ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಮತ್ತೆ ಭರ್ಜರಿ ಯಶಸ್ಸುಗಳಿಸಿದ್ದಾರೆ. ನಟಿಯ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದು 49 ವರ್ಷವಾದ್ರೂ ನಟಿ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.