ಬೆಂಗಳೂರು : ಜೆಡಿಎಸ್ ಉಪಾಧ್ಯಕ್ಷ ಹಾಗೂ ಉದ್ಯಮಿ ಯಾಗಿರುವ ಜಯ್ ತಾತಾ ಗೆ 50 ಕೋಟಿ ರೂಪಾಯಿ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕೆಂದ್ರ ಸಚಿವ H D ಕುಮಾರಸ್ವಾಮಿ( HD Kumaraswamy) ವಿರುದ್ಧ FIR ದಾಖಲು ಮಾಡಲಾಗಿದೆ.
ಮುಂಬರುವ ಚನ್ನಪಟ್ಟಣ ಉಪ ಚುನಾವಣೆಗೆ 50 ಕೋಟಿ ರು. ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಆಪ್ತರ ವಿರುದ್ಧ ನಗರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಉದ್ಯಮಿ ವಿಜಯ್ ತಾತಾ ದೂರು ನೀಡಿದ್ದು, ಅದರನ್ವಯ ಎಚ್.ಡಿ.ಕುಮಾರಸ್ವಾಮಿ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ವಿರುದ್ಧ ಜೀವ ಬೆದರಿಕೆ ಮತ್ತು ಸುಲಿಗೆ ಯತ್ನ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾತಾ ವಿರುದ್ಧ ರಮೇಶ್ ದೂರು: ತಮ್ಮ ವಿರುದ್ದ ಎಫ್‌ಐಆರ್‌ದಾಖಲಾದ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ವಿರುದ 100 ಕೋಟಿ ರು. ಹಾಗೂ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಗುರುವಾರ ಪ್ರತಿ ದೂರು ದಾಖಲಿಸಿದ್ದಾರೆ. ತಮ್ಮ ವಿರುದ್ದ 50 ಕೋಟಿ ರು. ಹಣ ಸುಲಿಗೆ ಆರೋಪ ಮಾಡಿದ್ದ ಉದ್ಯಮಿ ವಿಜಯ್ ತಾತಾ ಮೇಲೆ ನಗರ ಪೊಲೀಸ್ ಹೆಚ್ಚುವರಿ ಆಯುಕ್ತರಿಗೆ ಜೆಡಿಎಸ್ ಮುಖಂಡ ರಮೇಶ್ ಗೌಡ ದೂರು ನೀಡಿದ್ದಾರೆ. ಬಳಿಕ ಈ ದೂರು ಅಮೃತಹಳ್ಳಿ ಠಾಣೆಗೆ ರವಾನೆಯಾಗಿದೆ. ಆ.24ರಂದು ರಾತ್ರಿ ಉದ್ಯಮಿ ವಿಜಯ್ ತಾತಾ ಅವರ ಆಹ್ವಾನದ ಮೇರೆಗೆ ಅವರ ಮನೆಗೆ ಊಟಕ್ಕೆ ತೆರಳಿದ್ದೆ. ಆಗ ನಾನು ಹೆಣ್ಣೂರಿನಲ್ಲಿ ನಿರ್ಮಿಸಿರುವ ದೇವಾಲಯ ಹಾಗೂ ಶಾಲೆ ವಿಚಾರವನ್ನು ತಿಳಿಸಿದೆ. ಹೀಗೆ ಮಾತುಕತೆ ಮುಂದುವರೆದಾಗ ರಿಯಲ್ ಎಸ್ಟೇಟ್ ವ್ಯವಹಾರವೂ ಪ್ರಸ್ತಾಪವಾಯಿತು. ಆಗ ತಾನು ಆರ್ಥಿಕಸಂಕಷ್ಟದಲ್ಲಿ ಸಿಲುಕಿದ್ದು, ತುರ್ತಾಗಿ ನನಗೆ 100 ಕೋಟಿ ರು. ನೆರವು ನೀಡುವಂತೆ ವಿಜಯ್ ತಾತಾ ಕೋರಿದರು. ನಾನು ಹಣವಿಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ಅವರು ನಿಂದಿಸಿದರು ಎಂದು ರಮೇಶ್ ಆರೋಪಿಸಿದ್ದಾರೆ.