LATEST NEWS
ನಾಲ್ಕು ಕಾರು ಅಂಬ್ಯುಲೆನ್ಸ್ ನಡುವೆ ಭೀಕರ ರಸ್ತೆ ಅಪಘಾತ – ಐವರ ಸಾವು….!!

ಮುಂಬೈ ಅಕ್ಟೋಬರ್ 05: ಮುಂಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನಪ್ಪಿರುವ ಘಟನೆ ನಡೆದಿದೆ. ನಾಲ್ಕು ಕಾರು ಹಾಗೂ ಆಂಬ್ಯುಲೆನ್ಸ್ ಒಂದರ ನಡುವೆ ನಡೆದ ಸರಣಿ ಅಪಘಾತ ಮುಂಬೈನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ರಸ್ತೆಯಲ್ಲಿ ಒಂದು ವಾಹನ ಅಪಘಾತಕ್ಕೀಡಾಗಿತ್ತು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಕರೆಸಲಾಯಿತು. ಆಂಬ್ಯುಲೆನ್ಸ್ ಸ್ಥಳದಿಂದ ಹೊರಡುವಾಗ ವಾಹನವೊಂದು ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಹಲವರಿಗೆ ಗಾಯಗಳಾಗಿವೆ.

ಈ ಹಿಂದೆ ಅಪಘಾತ ಸಂಭವಿಸಿದ ಸ್ಥಳದಲ್ಲಿದ್ದ ವಾಹನಗಳ ಗುಂಪಿಗೆ ಹಿಂದಿನಿಂದ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿರುವ ದೃಶ್ಯಾವಳಿಯನ್ನು ಸಿಸಿಟಿವಿ ತೋರಿಸುತ್ತಿದೆ. ಸಂತ್ರಸ್ತರನ್ನು ಐಸಿಯುಗೆ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.