LATEST NEWS
ಮಾದಕ ವಸ್ತು MDMA Crystal ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಜನ ಆರೋಪಿಗಳ ಸೆರೆ
ಮಾದಕ ವಸ್ತು MDMA Crystal ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಜನ ಆರೋಪಿಗಳ ಸೆರೆ
ಮಂಗಳೂರು ಅಗಸ್ಟ್ 22: ಮಂಗಳೂರು ನಗರದಲ್ಲಿ ಮಾದಕ ವಸ್ತು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ 5 ಜನ ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ರೌಡಿ ನಿಗ್ರಹದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಮಾದಕ ವಸ್ತು MDMA Crystal ಹಾಗೂ 2 ಪಿಸ್ತೂಲ್ ಮತ್ತು 22 ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ಅಬ್ದುಲ್ ರವೂಪ್ ವಿ.ಎಸ್ , ಇಮ್ತಿಯಾಜ್ ಅಹಮ್ಮದ್ , ಟಿ.ಎಚ್.ರಿಯಾಜ್ , ಬಂಟ್ವಾಳ ನಿವಾಸಿಗಳಾದ ಉಸ್ಮಾನ್ ರಫೀಕ್ @ ತಲ್ಕಿ ರಫೀಕ್ ಮತ್ತು ಹಜ್ವರ್ ಎಂದು ಗುರುತಿಸಲಾಗಿದೆ.
ಬಂಧಿತರು ಮುಂಬಯಿಯಿಂದ ಮಾದಕ ವಸ್ತುಗಳನ್ನು ತಂದು ಕೇರಳ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಬಂಧಿತ ಆರೋಪಿಗಳು ಮಾದಕ ವಸ್ತುಗಳನ್ನು ಗಿರಾಕಿಗಳಿಗೆ ಮಾರಾಟ ಮಾಡುವ ಸಲುವಾಗಿ ಮಂಗಳೂರು ಕಡೆಯಿಂದ ಗುರುಪುರ ಬ್ರಿಡ್ಜ್ ನ ಕಡೆಗೆ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಮಂಗಳೂರು ರೌಡಿ ನಿಗ್ರಹದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಸದ್ರಿ ಕಾರನ್ನು ಪರಾರಿ ಜಂಕ್ಷನ್ ಬಳಿ ತಡೆದು ಚೆಕ್ ಮಾಡಲಾಗಿದ್ದು ಅದರಲ್ಲಿದ್ದ 5 ಜನರನ್ನು ವಶಕ್ಕೆ ಪಡೆದು ಅವರಿಂದ ಮಾದಕವಸ್ತು, ಸಾಗಾಟಕ್ಕಾಗಿ ಉಪಯೋಗಿಸಿದ್ದ ಬಲೆನೋ ಕಾರು-1 ಇದರ ಬೆಲೆ ಸುಮಾರು ರೂ 7,00,000/-, ಗಾಂಜಾದಿಂದ ತಯಾರಿಸಿದ ಉಂಡೆ-11 ಇದರ ಬೆಲೆ ಸುಮಾರು ರೂ 5,500/-, ಮಾದಕ ವಸ್ತು MDMA Crystal -100 ಗ್ರಾಂ ಇದರ ಬೆಲೆ ಸುಮಾರು ರೂ 1,80,000/- ಪಿಸ್ತೂಲ್ -2, ಮದ್ದುಗುಂಡುಗಳು-22 ಇದರ ಬೆಲೆ ಸುಮಾರು ರೂ. 1,15,000/-, ಮೊಬೈಲ್ ಪೋನ್ ಗಳು-11 ಇದರ ಬೆಲೆ ಸುಮಾರು ರೂ. 81,000/- ಮತ್ತು ನಗದು ಹಣ ರೂ, 63,690/- ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ, 11,45,190/-. ಅಗಿದೆ.