LATEST NEWS
ಅಷ್ಟಬಂಧ ಲೇಪನ ಮಾಡಿ 48 ದಿನ ಕೊಲ್ಲೂರಿನ ಉತ್ಸವ ಮಾಡುವಂತಿಲ್ಲ: ವಾರ್ಷಿಕ ಉತ್ಸವ ಮಾಡಲು ಅರ್ಚಕರಿಂದ ವಿರೋಧ!?

ಉಡುಪಿ, ಡಿಸೆಂಬರ್ 01: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಿ ಮಾರ್ಚ್ ನಲ್ಲಿ ವಾರ್ಷಿಕ ಉತ್ಸವ ಮಾಡಲು ಅರ್ಚಕರಿಂದ ವಿರೋಧ ವ್ಯಕ್ತವಾಗಿದ್ದು, ಅಷ್ಟಬಂಧ ಲೇಪನ ಮಾಡಿ 48 ದಿನ ಕೊಲ್ಲೂರಿನ ಉತ್ಸವ ಮಾಡುವಂತಿಲ್ಲ ಎಂದಿರುವ ಅರ್ಚಕರು ಎಂದಿದ್ದಾರೆ. ಈ ಗೊಂದಲದ ಬಗ್ಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ವ್ಯವಸ್ಥಾಪನಾ ಧಾರ್ಮಿಕ ವಿಧಿ ಬಗ್ಗೆ ಯಾವುದೇ ಗೊಂದಲಗಳು ಇಲ್ಲ, ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಪಟ್ಟಂತೆ 5 ಮೀಟಿಂಗ್ ಗಳು ನಡೆದಿದೆ. ಜನವರಿ 14 ಮಕರ ಸಂಕ್ರಮಣ ನಂತರ ಬ್ರಹ್ಮಕಲಶೋತ್ಸವ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಫೆಬ್ರವರಿ 7 ರಿಂದ 17 ರವರೆಗೆ ಮೂಲ ನಕ್ಷತ್ರದಲ್ಲಿ ವಾರ್ಷಿಕೋತ್ಸವ ಮಾಡಬೇಕೆಂಬ ಸಂಪ್ರದಾಯ ಇದೆ.

ಫೆಬ್ರವರಿಯಲ್ಲಿ ದಿನಾಂಕ ನಿಗದಿ ಮಾಡಿದ್ದೇವೆ ಇದು ಅಂತಿಮ ಅಲ್ಲ, ಆಡಳಿತ ಮಂಡಳಿ ಮತ್ತು ಅರ್ಚಕರು ಈ ಬಗ್ಗೆ ಚರ್ಚೆಗಳು ಆಗಿದೆ. ಬ್ರಹ್ಮಕಲಶೋತ್ಸವ ನಡೆದು 48 ದಿವಸದ ನಂತರ ಉತ್ಸವ ಆಗಬೇಕು ಎಂದು ಸಭೆಯಲ್ಲಿ ಯಾರು ನಮ್ಮ ಗಮನಕ್ಕೆ ತಂದಿಲ್ಲ. ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಅದು ಲೋಕದ ಉದ್ದಾರಕ್ಕಾಗಿ ನಾವು ಯಾವುದೇ ಶಿಷ್ಟಾಚಾರದ ವಿರುದ್ಧವಾಗಿ ಬ್ರಹ್ಮಕಲಶೋತ್ಸವವನ್ನು ಮಾಡುವುದಿಲ್ಲ.
ಪತ್ರ ಬರೆದ ನಂತರ ಮುಜರಾಯಿ ಇಲಾಖೆ ಶೈವಾಗಮ ಪಂಡಿತರನ್ನು ಕಳುಹಿಸಿಕೊಟ್ಟಿದೆ. ಅರ್ಚಕರು ವ್ಯವಸ್ಥಾಪಕರ ಸಮಿತಿ ಮತ್ತು ಶೈವಾಗಮ ಪಂಡಿತರ ಒಗ್ಗೂಡುವಿಕೆಯಲ್ಲಿ ಚರ್ಚೆಗಳು ಆಗಿದೆ. ಆಡಳಿತಾತ್ಮಕ ವಿಚಾರಗಳು ಮತ್ತು ಶಿಷ್ಟಾಚಾರಗಳ ಬಗ್ಗೆ ಚರ್ಚೆಗಳು ನಡೆಯಿತು. ಬ್ರಹ್ಮಕಲಶ ನಂತರ ದಡ ಸಂಪ್ರೋಕ್ಷಣೆ ಎಂಬುದನ್ನು ಮಾಡುತ್ತೇವೆ.
ಚರ್ಚೆಯಲ್ಲಿ ಆದ ವಿಚಾರಗಳನ್ನು ಮುಜರಾಯಿ ಇಲಾಖೆಗೆ ಶೈವಾಗಮ ಪಂಡಿತರು ಸಲ್ಲಿಕೆ ಮಾಡುತ್ತಾರೆ. ಮುಜುರಾಯಿ ಇಲಾಖೆ ಸೂಚನೆ ಕೊಟ್ಟ ಪ್ರಕಾರ ನಾವು ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಮಾಡುತ್ತೇವೆ. ವಾರ್ಷಿಕ ಉತ್ಸವ ಮಾಡಲು ಅರ್ಚಕರಿಂದ ವಿರೋಧ ಬ್ರಹ್ಮಕಲಕೋತ್ಸವ ಮಾಡಲು ಅರ್ಚಕರು ವ್ಯವಸ್ಥಾಪನ ಸಮಿತಿ ಊರಿನ ಗ್ರಾಮಸ್ಥರು, ಭಕ್ತರು ಉತ್ತುಕರಾಗಿದ್ದೇವೆ.
ಅರ್ಚಕರಿಗೂ ವ್ಯವಸ್ಥಾಪನ ಸಮಿತಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ದೇವಸ್ಥಾನದ ಗರ್ಭಗುಡಿಯಲ್ಲಿ ಅಷ್ಟಬಂಧ ಹಾಕಿದ ನಂತರ 48 ದಿವಸ ಅದು ಗಟ್ಟಿಯಾಗಲು ಬಿಡಬೇಕು ಎಂದು ಎಲ್ಲ ಲಿಖಿತ ರೂಪದಲ್ಲಿಲ್ಲ, ಅರ್ಧ ಮಂಡಲ ಅಥವಾ ಕಾಲು ಮಂಡಲ ಬಿಟ್ಟು ದಡ ಸಂಪ್ರೋಕ್ಷಣೆ ಮಾಡಬಹುದು ಎಂಬ ಅಭಿಪ್ರಾಯ ಇದೆ. ವ್ಯವಸ್ಥಾಪನ ಸಮಿತಿ ಅರ್ಚಕರು ಮುಜುರಾಯಿ ಇಲಾಖೆಯ ಇ ಓ ಮತ್ತು ಶೈವಾಗಮ ಪಂಡಿತರು ಇದ್ದೇ ಚರ್ಚೆ ಮಾಡಿದ್ದೇವೆ ಎಂದು ಉಡುಪಿಯಲ್ಲಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.