Connect with us

    UDUPI

    ಉಡುಪಿ ಜಿಲ್ಲೆಯಲ್ಲಿ ಇಂದು 41 ಕೊರೊನಾ ಪ್ರಕರಣ ದಾಖಲು

    ಉಡುಪಿ ಜುಲೈ 12: ಉಡುಪಿ ಜಿಲ್ಲೆಯಲ್ಲಿ ಇಂದು 41 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ 1608ಕ್ಕೆ ಏರಿಕೆಯಾಗಿದೆ.


    ಇಂದು ದಾಖಲಾದ 41 ಪ್ರಕರಣಗಳಲ್ಲಿ 26 ಪುರುಷರು, 11 ಮಹಿಳೆಯರು ಸೇರಿದಂತೆ 4 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ. 26 ಮಂದಿ ಉಡುಪಿ, 11 ಮಂದಿ ಕುಂದಾಪುರ ಹಾಗೂ 4 ಮಂದಿ ಕಾರ್ಕಾಳಕ್ಕೆ ಸೇರಿದವರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇಂದು 28 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 1273 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 1304 ಮಂದಿ ಮನೆಗಳಲ್ಲಿ ಮತ್ತು 140 ಜನರು ಆಸ್ಪತ್ರೆಗಳ ಐಸೊಲೇಶನ್‌ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಪ್ರಸ್ತುತ 332 ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 1608 ಕೊರೊನಾ ಪ್ರಕರಣ ಪತ್ತೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply