DAKSHINA KANNADA
ಕರ್ನಾಟಕದಲ್ಲಿ 40 ಪರ್ಸೆಂಟ್ ಸರಕಾರ ನಡೆಯುತ್ತಿದೆ, ಧರ್ಮ ಧರ್ಮಗಳ ನಡುವೆ ಕಿಡಿಹೊತ್ತಿಸುವುದು ಬಿಜೆಪಿ ಕೆಲಸವಾಗಿದೆ: ಮಲ್ಲಿಕಾರ್ಜುನ ಖರ್ಗೆ
ಸುಳ್ಯ, ಎಪ್ರಿಲ್ 25: ಸುಳ್ಯದಲ್ಲಿ ಬೃಹತ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನಾ ಖಾವೂಂಗಾ,ನಾ ಖಾನೆ ದೂಂಗಾ ಎಂದು ಪ್ರಧಾನಿ ಎಲ್ಲಾ ಕಡೆ ಹೇಳುತ್ತಾರೆ, ಆದರೆ ಕರ್ನಾಟಕದಲ್ಲಿ 40 ಪರ್ಸೆಂಟ್ ಸರಕಾರ ನಡೆಯುತ್ತಿದೆ, 40 ಪರ್ಸೆಂಟ್ ತಿನ್ನುವವರು ನಿಮ್ಮ ಪಕ್ಕದಲ್ಲಿ ಕೂತ್ಕೋತಾರೆ, ಇವರು ತಿನ್ನೋದು ನಿಮಗೆ ಕಾಣುತ್ತಿಲ್ಲವೇ, ಮೋದಿಜಿಯವ್ರೇ ದೊಡ್ಡ ದೊಡ್ಡ ಕೆಲಸವನ್ನ ಮಾಡಿ, ಅದು ಬಿಟ್ಟು ಹೋಗೊ ರೈಲಿಗೆ ಫ್ಲ್ಯಾಗ್ ತೋರಿಸ್ಬೇಡಿ.
ಈ ಬಾರಿಯ ಚುನಾವಣೆ ಬಹಳ ಮುಖ್ಯವಾದ ಚುನಾವಣೆ, ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು, ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಬೇಕು, ಈಗಿರುವ ಸರ್ಕಾರ 40 ಪರ್ಸೆಂಟ್ ಸರ್ಕಾರ, ಇಲ್ಲಿನವರೇ ಕಾಂಟ್ರ್ಯಾಕ್ಟರ್ ಗಳು ಹೇಳ್ತಾರೆ ಕರ್ನಾಟಕದಲ್ಲಿ 40 ಪರ್ಸೆಂಟ್ ಇದೆ ಅಂತಾರೆ. ಇಂತಹ ಕೆಟ್ಟ ಸರ್ಕಾರವನ್ನ ತೆಗೆಯಬೇಕಿದೆ, ಹಿಂದೆ ಬಡವರು ಕೂಡಾ ಬ್ಯಾಂಕ್ ಗೆ ಹೋಗುವಂತೆ ಮಾಡಿದ್ದು ಇಂದಿರಾಗಾಂಧಿ, ಮಂಗಳೂರು-ಉಡುಪಿಯ ಜನತೆ ಬ್ಯಾಂಕ್ ಸ್ಥಾಪನೆ ಮಾಡಿದವ್ರು, ಆದ್ರೆ ಇದೀಗ ಕರಾವಳಿಯ ಕೆಲ ಬ್ಯಾಂಕ್ ಗಳನ್ನ ಬೇರೆ ಬ್ಯಾಂಕ್ ಜೊತೆ ವಿಲೀನ ಮಾಡಿದ್ದಾರೆ.
ಇದು ಯಾತಕ್ಕಾಗಿ ಅಂತ ಮೋದಿಜಿ ಅವರು ಹೇಳಬೇಕು, ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವ ಪ್ರಯೋಜನವೂ ಆಗಿಲ್ಲ, ನಮ್ಮ ಕಾಂಗ್ರೆಸ್ ಸರ್ಕಾರ ಇರುವಾಗ ಅದೆಷ್ಟೋ ಕಾರ್ಯಕ್ರಮಗಳನ್ನ ಕೊಟ್ಟು ಮಂಗಳೂರು ಮತ್ತು ಉಡುಪಿಯನ್ನ ಅಭಿವೃದ್ಧಿ ಮಾಡಿದೆ. ಕರಾವಳಿಯಲ್ಲಿ ಧರ್ಮ ಧರ್ಮಗಳ ನಡುವೆ ಕಿಡಿಹೊತ್ತಿಸುವುದು ಬಿಜೆಪಿ ಕೆಲಸವಾಗಿದೆ. ಆದ್ರೆ ಮೋದಿಜಿ ಅವ್ರು ಹೇಳ್ತಾರೆ 70 ವರ್ಷಗಳಲ್ಲಿ ಕಾಂಗ್ರೆಸ್ ಏನ್ ಮಾಡಿದೆ ಅಂತ, ಸ್ವಾಮಿ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆಯನ್ನ ನೀವೆಂದೂ ಮಾಡಿಲ್ಲ.
ರೈತರಿಗೆ 72000 ಕೋಟಿ ಪ್ಯಾಕೇಜ್ ನೀಡಿರುವಂತದ್ದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ದೊಡ್ಡ ದೊಡ್ಡ ಕಾರ್ಖಾನೆಗಳನ್ನ ಸ್ಥಾಪಿಸಿದ್ದು ಕಾಂಗ್ರೆಸ್, ಅಧಿಕಾರಗೋಸ್ಕರ ಬಿಜೆಪಿ ಸಮಾಜನ್ನ ವಿಭಜನೆ ಮಾಡ್ತಾರೆ, ಜಾತಿ ಜಾತಿ ಗಳ ನಡುವೆ ಕಿಡಿಹೊತ್ತಿಸಿ ಅಶಾಂತಿ ನಿರ್ಮಿಸ್ತಾರೆ.
ಕರ್ನಾಟಕ ಶೈಕ್ಷಣಿಕವಾಗಿ ಮುಂದಿದೆ, ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಮೆಡಿಕಲ್ ಕಾಲೇಜು ಬಡವರಿಗಾಗಿ ಸ್ಥಾಪನೆ ಮಾಡ್ತೇವೆ. ಅಡಿಕೆ ರೋಗ ನಿವಾರಣೆ ಮಾಡಬೇಕಾದ್ರೆ ಬಿಜೆಪಿ ಸರ್ಕಾರ ರಿಸರ್ಚ್ ಮಾಡ್ಬೇಕು ಅಂತಾರೆ, ಆದ್ರೆ ನಮ್ಮ ಸರ್ಕಾರ ಬಂದಲ್ಲಿ ಎಷ್ಟೇ ಖರ್ಚಾದ್ರು ಅದಕ್ಕೆ ಪರಿಹಾರ ಕೊಡುವಲ್ಲಿ ಸಫಲರಾಗ್ತೇವೆ. ಬಡವರಿಗಾಗಿ ಕಾಂಗ್ರೆಸ್ ಹೊರತು ಬಿಜೆಪಿಯಲ್ಲ, ಸುಮ್ನೇ ಪ್ರಚಾರ ತೆಗೆದುಕೊಂಡು ಅಭಿವೃದ್ದಿ ಮಾಡಿದ್ದೀನಿ ಹೇಳ್ಬೇಡಿ ಕಾಂಗ್ರೆಸ್ ಸರ್ಕಾರದ ಈ ಬಾರಿಯ ಗ್ಯಾರಂಟಿ ಕಾರ್ಡ್ ಏನಿದೆ ಅದು ನಿಮಗೆ ಪಕ್ಕ ಗ್ಯಾರಂಟಿ.
ಯುವಕರಿಗೆ ಬಿಜೆಪಿ ಸರ್ಕಾರ ಉದ್ಯೋಗ ಕೊಡುವ ಭರವಸೆ ನೀಡಿತ್ತು, ಆದ್ರೆ ಇಲ್ಲೀವರೆಗೂ ಈಡೇರಿಲ್ಲ, ಆದ್ರೆ ಕಾಂಗ್ರೆಸ್ ಸರ್ಕಾರ ಯುವಕರಿಗೆ ಪ್ರತಿಜ್ಞೆ ಮಾಡುತ್ತೆ ಖಂಡಿತವಾಗಿಯೂ ಉದ್ಯೋಗ ನೀಡುವಂತ ಕೆಲಸ ಮಾಡುತ್ತೆ. ಬಿಜೆಪಿಯವ್ರೇ ಆಶ್ವಾಸನೆ ಕೊಡೋದನ್ನ ಬಿಟ್ಟು ಬಿಡಿ, ದೇಶದಲ್ಲಿ ಅದೆಷ್ಟೋ ನೌಕರಿಗಳಿವೆ ಅದನ್ನ ಮೊದಲು ಭರ್ತಿ ಮಾಡಿ, ದೇಶದ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿಯನ್ನ ಸೋಲಿಸಿ, ಕಾಂಗ್ರೆಸ್ ನ್ನ ಗೆಲ್ಲಿಸಿ ಎಂದು ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.