Connect with us

LATEST NEWS

ಕಾರು ಪಾರ್ಕಿಂಗ್ ಮಾಡುವಾಗ ಕಾರಿನಡಿ ಸಿಲುಕಿ ಪ್ರಾಣ ಬಿಟ್ಟ ನಾಲ್ಕು ವರ್ಷದ ಮಗು

ಹೈದರಾಬಾದ್ : ಕಾರು ಪಾರ್ಕಿಂಗ್ ಮಾಡುವಾಗಿ ಕಾರಿನ ಅಡಿಗೆ ಸಿಲುಕಿ ನಾಲ್ಕು ವರ್ಷದ ಕಂದಮ್ಮ ಧಾರುಣವಾಗಿ ಸಾವನಪ್ಪಿರುವ ಘಟನೆ ಹೈದ್ರಾಬಾದ್​ನ ಎಲ್​ಬಿ ನಗರ್​ನಲ್ಲಿ ನಡೆದಿದೆ.


ಹೈದರಾಬಾದ್ ನ ಎಲ್ ಬಿ ನಗರದಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷಣ್ ಎಂಬವರ ನಾಲ್ಕು ವರ್ಷದ ಮಗು ಸಾತ್ವಿಕ್ ಮೃತ ಬಾಲಕ. ಲಕ್ಷಣ್​ ಎಸ್​ಯುವಿ ಕಾರ ಒಂದನ್ನು ಒಳಗೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಲಕ್ಷಣ್​ ಹಿಂದೆಯೇ ನಾಲ್ಕು ವರ್ಷದ ಮಗ ಸಾತ್ವಿಕ್​ ಓಡಿ ಬಂದು ಕಾರಿನ ಹಿಂದೆ ತೆರಳಿ ಮತ್ತೆ ಕಾರಿನ ಮುಂಭಾಗಕ್ಕೆ ಬಂದಿದ್ದಾನೆ. ಈ ಸಂದರ್ಭ ಲಕ್ಷ್ಮಣ್​ ಕಾರನ್ನು ಮುಂದಕ್ಕೆ ಚಲಿಸಿದ್ದು, ಮಗುವಿನ ಮೇಲೆ ಹತ್ತಿಸಿದ್ದಾರೆ. ಈ ವೇಳೆ ಸಾತ್ವಿಕ್​ ಚಕ್ರದ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿದ್ದಾನೆ.


ಇದಾದ ಬಳಿಕ ಏನೋ ಅನಾಹುತ ನಡೆದಿರುವ ಅರಿವಾದ ತಂದೆ ಲಕ್ಷ್ಮಣ್​ಗೆ ಮಗ ಸಾವನ್ನಪ್ಪಿರುವುದು ತಿಳಿದಿದೆ. ತಕ್ಷಣಕ್ಕೆ ಮಗವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡ ಮಗು ಸಾವನಪ್ಪಿದ್ದಾನೆ. ಎಲ್​ಬಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಮನಕಲಕುವಂತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *