LATEST NEWS
ತಿರುಪತಿಯಲ್ಲಿ ಭೀಕರ ಕಾಲ್ತುಳಿತಕ್ಕೆ ನಾಲ್ವರು ಭಕ್ತರು ಸಾವು…!!
ತಿರುಮಲ ಜನವರಿ 08: ವೈಕುಂಠ ಏಕಾದಶಿ ಆಚರಣೆಯ ಟೋಕನ್ ತೆಗೆದುಕೊಳ್ಳುವ ವೇಳೆ ಉಂಟಾದ ಕಾಲ್ತುಳಿತಕ್ಕೆ ಕನಿಷ್ಠ ನಾಲ್ವರು ಭಕ್ತರು ಸಾವನಪ್ಪಿದ ಘಟನೆ ತಿರುಪತಿಯಲ್ಲಿ ನಡೆದಿದೆ.
ತಮಿಳುನಾಡಿನ ಸೇಲಂನ ಮಹಿಳೆ ಸೇರಿದಂತೆ ನಾಲ್ವರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ ಈ ದುರಂತ ಘಟನೆ ನಡೆದಿದೆ. ತಿರುಪತಿಯ ವಿಷ್ಣುನಿವಾಸಂ ಬಳಿ ನೂಕುನುಗ್ಗಲು ಸಂಭವಿಸಿ ದುರಂತ ಸಂಭವಿಸಿದೆ. ಅಲಿಪಿರಿ, ಶ್ರೀನಿವಾಸಂ, ಸತ್ಯನಾರಾಯಣಪುರಂ ಹಾಗೂ ಪದ್ಮಾವತಿಪುರಂನಲ್ಲಿ ಭಕ್ತರು ಜಮಾಯಿಸಿದ್ದರಿಂದ ಭಾರಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಕಾಲ್ತುಳಿತ ಉಂಟಾಗಿದೆ.
1 Comment