LATEST NEWS
ಡ್ರಗ್ಸ್ ಮತ್ತು ಯೋಗದ ಅಮಿಷವೊಡ್ಡಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ…

ಡ್ರಗ್ಸ್ ಮತ್ತು ಯೋಗದ ಅಮಿಷವೊಡ್ಡಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ…
ರಿಷಿಕೇಶ್, ಅಕ್ಟೋಬರ್ 09: ಯೋಗ ಕಲಿಯುವ ಹಿನ್ನಲೆಯಲ್ಲಿ ಉತ್ತರಖಂಡದ ರಿಷಿಕೇಶಕ್ಕೆ ಬಂದಿದ್ದ ಅಮೇರಿಕಾ ಮೂಲದ ಮಹಿಳೆಯ ಮೇಲೆ ರಿಷಿಕೇಶದ ಸ್ಥಳೀಯ ಯುವಕನೋರ್ವ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ.
ಅಭಿನವ್ ರಾಯ್ ಎನ್ನುವ ಯುವಕ ಈ ಕೃತ್ಯ ಎಸಗಿದ್ದು, ಮಹಿಳೆಗೆ ಯೋಗ ಮತ್ತು ಡ್ರಗ್ಸ್ ನ ಅಮಿಷವೊಡ್ಡಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಮುನಿ ಕಿ ರೀಟಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ ಉಳಿದುಕೊಂಡಿದ್ದ ಫ್ಲಾಟ್ ಗೆ ನುಗ್ಗಿ ಯುವಕ ಮೊದಲ ಬಾರಿಗೆ ಅತ್ಯಾಚಾರ ನಡೆಸಿದ್ದು, ಬಳಿಕದ ದಿನಗಳಲ್ಲಿ ಮಹಿಳೆಯನ್ನು ತನ್ನ ಫ್ಲಾಟ್ ಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಯೋಗ ಕಲಿಸುವ ಹಾಗೂ ಡ್ರಗ್ಸ್ ನೀಡುವ ನೆಪದಲ್ಲಿ ಯುವಕ ಮಹಿಳೆಯನ್ನು ತನ್ನ ರೂಂ ಗೆ ಕರೆಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಮಹಿಳೆಗೆ ಡ್ರಗ್ಸ್ ಚಟವನ್ನು ದುರುಪಯೋಗ ಪಡಿಸಿಕೊಂಡ ಯುವಕನ ಮೇಲೆ ಇದೀಗ ಪೋಲೀಸ್ ದೂರು ದಾಖಲಾಗಿದೆ.
ಆದರೆ ದೂರನ್ನು ಹಿಂದೆ ಪಡೆಯುವಂತೆ ವಿದೇಶೀ ಮಹಿಳೆಗೆ ಯುವಕನ ತಂದೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.