LATEST NEWS
ಆಂಬ್ಲಮೊಗರು ಗ್ರಾಮ ಪಂಚಾಯತ್ ನ ಗ್ರಾಮ ಸಹಾಯಕ ನೇಣಿಗೆ ಶರಣು

ಮಂಗಳೂರು ಜುಲೈ 29:ಆಂಬ್ಲಮೊಗರು ಗ್ರಾಮ ಪಂಚಾಯತ್ ಗ್ರಾಮ ಸಹಾಯಕ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತರನ್ನು ಆಂಬ್ಲ ಮೊಗರುವಿನ ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ ಎಂದು ತಿಳಿದು ಬಂದಿದೆ.
ನಿತಿನ್ ಅವರು ಅಂಬ್ಲಮೊಗರು ಗ್ರಾಮ ಪಂಚಾಯತಿನಲ್ಲಿ ಗ್ರಾಮಕರಣಿಕರ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ದು ಇಂದು ಬೆಳಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುತ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು . ನಂತರ ಮನೆಗೆ ತೆರಳಿದ ನಿತಿನ್ ಬೆಡ್ ರೂಮಿನೊಳಗೆ ಹೋ ಗಿದ್ದರೆನ್ನಲಾಗಿದೆ. ಬೆಳಗ್ಗೆ 9.30 ಆದರೂ ಮಗ ಚಹಾ ಕುಡಿಯಲು ಏಕೆ ಬಂದಿಲ್ಲವೆಂದು ತಾಯಿ ರೂಮಿನೊಳಗೆ ಹೋದಾಗ ಆತಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
