Connect with us

    LATEST NEWS

    ಮಂಗಳೂರಿನಿಂದ 3,000 Km ದೂರದ ಕೇದಾರನಾಥ್‌ಗೆ ಸೈಕಲ್ ನಲ್ಲಿ ಇಬ್ಬರು ಯುವಕರ ಸಾಹಸ ಯಾತ್ರೆ..!

    ಮಂಗಳೂರು : ಮಂಗಳೂರಿನಿಂದ 3000 ಕಿಲೋ ಮೀಟರ್ ದೂರದ  ಪ್ರಸಿದ್ದ ಯಾತ್ರಾ ಸ್ಥಳ ಕೇದಾರನಾಥ್‌ಗೆ ಇಬ್ಬರು ಯುವಕರು ಸೈಕಲ್ ನಲ್ಲಿ ಸಾಹಸ ಯಾತ್ರೆ ಕೈಗೊಂಡಿದ್ದಾರೆ.

    ಮಂಗಳೂರಿನ ಪುನೀತ್, ರಕ್ಷಿತ್ ಎಂಬ ಯುವಕರು ಮಂಗಳೂರು ನಗರದ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಮಂಗಳವಾರ ಮುಂಜಾನೆ ತಮ್ಮ ಸಾಹಸ ಯಾತ್ರೆ ಆರಂಭಿಸಿದ್ದಾರೆ.

    ಧಾರ್ಮಿಕ ಕೇಂದ್ರ  ಸಂದರ್ಶಿಸುವ ಜೊತೆಗೆ ಪರಿಸರ ಉಳಿವಿಗಾಗಿ, ಮರಗಿಡಗಳನ್ನು ಬೆಳೆಸಲು ಮತ್ತು ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ  ಈ ಸೈಕಲ್ ಯಾತ್ರೆಯ ದಾರಿಯುದ್ದಕ್ಕೂ ಮಾಡಲಿದ್ದಾರೆ. ಕರಾವಳಿ ವೀರ ಶೈವ ಕ್ಷೇಮಾಭೀವೃದ್ದಿ ಸಂಘದ ಪದಾಧಿಕಾರಿಗಳು ಶುಭ ಹಾರೈಸಿ ಕದ್ರಿ ದೇವಳದಲ್ಲಿ ಯುವಕರನ್ನು ಬೀಳ್ಕೊಟ್ಟರು.

    Share Information
    Advertisement
    Click to comment

    You must be logged in to post a comment Login

    Leave a Reply